ಪಾಕಿಸ್ತಾನದ ಮರ್ದನ್ ನಗರದಲ್ಲಿ ಜಿಲ್ಲಾ ಕೋರ್ಟ್ ಮೇಲೆ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಿಂದ ಕನಿಷ್ಟ 12 ಜನರು ಹತರಾಗಿದ್ದು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಾಂಬರ್ ಮೊದಲಿಗೆ ಕೋರ್ಟ್ ಕಟ್ಟಡದತ್ತ ಕೈ ಗ್ರೆನೇಡ್‌ಗಳನ್ನು ಎಸೆದು ಬಳಿಕ ಕೋರ್ಟ್‌ನಲ್ಲಿ ಬೆಳಿಗ್ಗೆ ನೆರೆದಿದ್ದ ಗುಂಪಿನ ನಡುವೆ ಆತ್ಮಾಹುತಿ ಉಡುಪನ್ನು ಸ್ಫೋಟಿಸಿಕೊಂಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪೇಶಾವರದಲ್ಲಿ ಕ್ರೈಸ್ತರ ಕಾಲೋನಿಯೊಂದರ ಮೇಲೆ ಆತ್ಮಾಹುತಿ ಬಾಂಬರ್‌ಗಳು ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಫೋಟ ಸಂಭವಿಸಿದೆ.
ಇಲ್ಲಿವರೆಗೆ ವಕೀಲರು, ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ 12 ದೇಹಗಳು ಪತ್ತೆಯಾಗಿವೆ.ಈ ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತುಕೊಂಡಿಲ್ಲ. ಮೂರು ವಾರಗಳ ಕೆಳಗೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಆತ್ಮಾಹುತಿ ದಾಳಿಯಲ್ಲಿ ಅಸಂಖ್ಯಾತ ವಕೀಲರು ಪ್ರಾಣಕಳೆದುಕೊಂಡಿದ್ದರು.