Webdunia - Bharat's app for daily news and videos

Install App

ಹೃದಯಾಘಾತದಿಂದ 10 ಜನ ಸಾವು

Webdunia
ಸೋಮವಾರ, 23 ಅಕ್ಟೋಬರ್ 2023 (20:19 IST)
ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗರ್ಭಾ ಮಾಡುತ್ತಿದ್ದ 10 ಮಂದಿ ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಗರ್ಭಾ ನೃತ್ಯ ಮಾಡುವಾಗ ಕೆಲವರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ . ಇದರಲ್ಲೂ ದುರಂತವೆಂದರೆ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚಿನವರು ಹದಿಹರೆಯದವರು, ಮಧ್ಯ ವಯಸ್ಕರಾಗಿದ್ದಾರೆ.

ಇತ್ತೀಚೆಗೆ ಬರೋಡಾದ ದಾಭೋಯ್‌ನ 13 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಶುಕ್ರವಾರ ಅಹಮದಾಬಾದ್‌ನ 24 ವರ್ಷದ ಯುವಕ ಗರ್ಭಾ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅದೇ ರೀತಿ ಕಪದ್ವಾಂಜ್‌ನ 17 ವರ್ಷದ ಯುವಕ ಕೂಡ ಗರ್ಭಾ ಆಡುವಾಗ ಸಾವನ್ನಪ್ಪಿದ್ದಾನೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಇದೇ ರೀತಿಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದ್ದರಿಂದ, ಗರ್ಭಾ ಕಾರ್ಯಕ್ರಮಗಳ ಸಂಘಟಕರು ಮತ್ತು ಸರ್ಕಾರ ಈ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಗರ್ಭಾ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಜಾಗರೂಕರಾಗಿರಬೇಕು ಎಂದು ಸರ್ಕಾರ ತಿಳಿಸಿದೆ. ಇನ್ನು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳು ತ್ವರಿತವಾಗಿ ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗರ್ಭಾ ಸಂಘಟಕರಿಗೆ ಸರ್ಕಾರ ಸೂಚನೆ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments