ಕೈರೋ : ವಿದ್ಯಾರ್ಥಿನಿಯೊಬ್ಬಳನ್ನು ಯುವಕ ತಬ್ಬಿಕೊಂಡಿದ್ದಕ್ಕೆ ಆಕೆಯನ್ನು ವಿಶ್ವವಿದ್ಯಾಲಯದಿಂದಲೇ ಡಿಬಾರ್ ಮಾಡಿದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.
ಯುವತಿ ಅಲ್- ಅಜರ್ ವಿಶ್ವವಿದ್ಯಾಲಯ ಓದುತ್ತಿದ್ದಳು. ಅಲ್ – ಅಜರ್ ಈಜಿಪ್ಟಿನ ಅತ್ಯುನ್ನತ ಸುನ್ನಿ ಮುಸ್ಲಿಂ ಜನಾಂಗದ ಪ್ರಮುಖ ಶಾಖೆಯಾಗಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವಿದೆ.
ಆದರೆ ಅಲ್- ಅಜರ್ ವಿಶ್ವವಿದ್ಯಾಲಯ ಓದುತ್ತಿದ್ದ ಯುವತಿಗೆ ಯುವಕನೊಬ್ಬ ಲವ್ ಪ್ರಪೋಸ್ ಮಾಡಿ ಉತ್ಸಾಹದಿಂದ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಯುವತಿ ತನ್ನ ಸಂಸ್ಥೆಯ ಗೌರವವನ್ನು ಹಾಳು ಮಾಡಿದ್ದಾಳೆಂದು ಅಲ್- ಅಜರ್ ವಿಶ್ವವಿದ್ಯಾಲಯ ಆಕೆಯನ್ನು ಡಿಬಾರ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.