Select Your Language

Notifications

webdunia
webdunia
webdunia
webdunia

1.68 ಕೋಟಿ ಕೊಟ್ಟು ಖರೀದಿಸಿದ ಕಾರು ಒಂದೇ ಗಂಟೆಯಲ್ಲಿ ಪುಡಿ ಪುಡಿ..!

1.68 crore rupees car crashed after one hour of buying
ಲಂಡನ್ , ಶನಿವಾರ, 29 ಜುಲೈ 2017 (10:39 IST)
1.68 ಕೋಟಿ ಕೊಟ್ಟು ಖರೀದಿಸಿದ ಕಾರು ಒಂದೇ ಗಂಟೆಯಲ್ಲಿ ಅಪಘಾತಕ್ಕೀಡಾಗಿ ನಜ್ಜುಗುಜ್ಜಾಗಿರುವ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ಆದರೆ, ಕಾರು ಚಾಲಕ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ಧಾನೆ.
 

ನಜ್ಜುಗುಜ್ಜಾಗಿರುವ, ಸುಟ್ಟು ಹೊಗೆ ಬರುತ್ತಿರುವ ಕಾರಿನ ಪೋಟೋವನ್ನ ಸೌತ್ ಯಾರ್ಕ್ ಶೇರ್ ಪೊಲೀಸರು ಟ್ವಿಟ್ಟರ್`ನಲ್ಲಿ ಶೇರ್ ಮಾಡಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಈ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತುಕೊಂಡಿದೆ. ಬೆಂಕಿ ಜ್ವಾಲೆಯಲ್ಲಿ ಕಾರು ಉರಿದರೂ ಡ್ರೈವರ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

200,000 ಪೌಂಡ್ (1.68 ಕೋಟಿ ರೂ.) ಬೆಲೆಯ ಫೆರಾರಿ 430 ಸ್ಕೂಡೇರಿಯಾ ಕಾರು ಇದಾಗಿದೆ. ಕಾರು ಚಾಲಕ ಮಾತ್ರ ಲಕ್ಕಿ, ಕಾರಿನ ಪರಿಸ್ಥಿತಿ ಮಾತ್ರ ಹೇಳತೀರದು. ಪುಡಿಪುಡಿಯಾಗಿದೆ ಅಂತಾರೆ ಪೊಲೀಸರು. ಅಪಘಾತದ ಬಳಿಕ ಹೊಸ ಕಾರಿನಲ್ಲೇ ಏನಾದರು ಸಮಸ್ಯೆ ಇತ್ತ ೆಂಬ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು