ಹಾಲಿವುಡ್ ನಟಿ ಇವಾ ಲಂಗೋರಿಯಾ ಪಾರ್ಕರ್ ಸಾರ್ವಜನಿಕ ಸ್ಥಳದಲ್ಲೇ ತನ್ನ ಪ್ರಿಯಕರನೊಂದಿಗೆ ಮುತ್ತಿನ ಮಳೆಗರೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಛಾಯಾಚಿತ್ರ ಅವರಿಬ್ಬರ ಗಾಢ ಸಂಬಂಧವನ್ನು ಸೂಚಿಸುತ್ತದೆ ಎಂದು ಡೈಲಿಮೇಲ್ ಪತ್ರಿಕೆ ವರದಿಮಾಡಿದೆ.
ಈ ಮುತ್ತಿನ ಛಾಯಾಚಿತ್ರ ಹಾಲಿವುಡ್‌ನಲ್ಲಿ ಹರಿದಾಡುತ್ತಿದ್ದ ಹಲವು ಊಹಾಪೋಹ ಪ್ರಶ್ನೆಗಳಿಗೆ ಉತ್ತರ ನೀಡಿದೆ.
ಪತಿಯಿಂದ ದೂರವಾಗಿರುವ ನಟಿ ಇವಾ ಲಂಗೋರಿಯಾ ಇಪ್ಪತ್ತೈದು ವರ್ಷದ ಗಾಯಕ ಎಡ್ಯುಆರ್ಡೊ ಕ್ರೂಜ್‌ನೊಂದಿಗೆ ಸುತ್ತಾಡುತ್ತಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ಹಬ್ಬಿತ್ತು.
ಆದರೆ ಇತ್ತೀಚೆಗಷ್ಟೆ ಲಾಸ್ ಎಂಜಲೀಸ್‌ನ ಚಾಟಿಒ ಮಾರ್ಮೊಂಟ್ ಹೊಟೇಲ್‌ನಲ್ಲಿ ಇವಾ ಲಂಗೋರಿಯಾ ಮತ್ತು ಗಾಯಕ ಎಡ್ಯುಆರ್ಡೊ ಕ್ರೂಜ್ ಬಿಗಿದಪ್ಪಿ ಮುತ್ತುಕೊಟ್ಟಿರುವುದು ಈ ಸುದ್ದಿಗಳಿಗೆ ಸಾಕ್ಷ್ಯ ಒದಗಿಸಿದೆ.
ಬಾಸ್ಕೆಟ್ ಬಾಲ್ ಕ್ರೀಡಾಪಟು ಟೋನಿ ಪಾರ್ಕರ್‌ನನ್ನು ವಿವಾಹವಾಗಿದ್ದ ನಟಿ ಇವಾ ಲಂಗೋರಿಯಾ ಜನವರಿಯಲ್ಲಿ ವಿಚ್ಛೇದನ ಹೊಂದಿದ್ದರು.