Select Your Language

Notifications

webdunia
webdunia
webdunia
webdunia

ವೇಶ್ಯಾಗೃಹದಲ್ಲಿ ಪಾಪ್ ಗಾಯಕಿ ರಿಹಾನಾ

ಪಾಪ್ ಗಾಯಕಿ ರಿಹಾನಾ
ವೇಶ್ಯಾಗಾರಿಕೆಯಲ್ಲಿ ಕುಖ್ಯಾತಿ ಹೊಂದಿರುವ ಆಸ್ಟ್ರೇಲಿಯಾದ ಮಳಿಗೆಯೊಂದರಲ್ಲಿ ಹೆಸರಾಂತ ಪಾಪ್ ಗಾಯಕಿ ರಿಹಾನಾ ಕಾಣಿಸಿಕೊಂಡಿದ್ದಾರೆ. ವೇಶ್ಯಾಗೃಹದಿಂದ ಹೊರಬಂದಾಗ ತಟ್ಟನೆ ಛಾಯಾಗ್ರಾಹಕರನ್ನು ಕಂಡ ರಿಹಾನಾ ಮುಗುಳ್ನಕ್ಕು ಮುಂದೆ ಹೋದರು ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ವಿಷಯವನ್ನು ಬಹಿರಂಗಪಡಿಸುವುದಿಲ್ಲ ಎಂದು ಆಕೆಯ ವಕ್ತಾರ ತಿಳಿಸಿದ್ದಾರೆ.

ತನ್ನ ಮಾದಕತೆ ಮತ್ತು ಕಂಚಿನ ಕಂಠದಿಂದ ಹೆಸರುವಾಸಿಯಾಗಿರುವ ರಿಹಾನಾ ಹಲವಾರು ವೇಶಭೂಷಣದೊಂದಿಗೆ, ವಿಚಿತ್ರ ಮತ್ತು ವಿಕಾರತೆಯನ್ನು ಸಂಗೀತದಲ್ಲಿ ಅಳವಡಿಸಿ ಎಲ್ಲರ ಗಮನ ಸೆಳೆಯುವುದು ಹೊಸತೇನಲ್ಲ.

ಆದರೂ ಸ್ಪಲ್ಪ ಅತಿರೇಕವೆಂಬಂತೆ ಇತ್ತೀಚೆಗೆ ಸ್ಕಿನ್ ಕೇರ್ ಬ್ರಾಂಡ್ ನಿವ್ಯ ಕಂಪನಿಯ ಶತಮಾನೋತ್ಸವದ ಜಾಹಿರಾತೊಂದಕ್ಕೆ ಬೆತ್ತಲಾಗುವ ಮೂಲಕ ಸುದ್ಧಿಯಾಗಿದ್ದರು.

ಈ ಮೊದಲು ಬೆತ್ತಲೆ ಕವುಚಿ ಮಲಗಿ ಪ್ಲೇಬಾಯ್ ಪತ್ರಿಕೆಗೆ ಪೋಸು ನೀಡಿದ್ದರು. ಈ ಬಗ್ಗೆ ಅಭಿಪ್ರಾಯ ಕೇಳಲು ಹೋದ ಸುದ್ಧಿಗಾರರಿಗೆ, ಪ್ಲೇಬಾಯ್‌ ಪತ್ರಿಕೆಯವರು ಸಂಪೂರ್ಣ ತೋರಿಸುವುದಾಗಿದ್ದರೆ ಅವರಿಂದ ಹಣ ಪಡೆಯುತ್ತಿರಲಿಲ್ಲ ಎಂಬ ಉತ್ತರ ನೀಡಿದ್ದರು 23 ವರ್ಷದ ಮಾದಕ ಗಾಯಕಿ ರಿಹಾನ.

Share this Story:

Follow Webdunia kannada