Select Your Language

Notifications

webdunia
webdunia
webdunia
webdunia

ಲಿಜ್‌ ಟೇಲರ್ ನಂತರದ ಸಾವು ನಂದೇ ಎಂದ ಜ್ಹಾ ಜ್ಹಾ ಗಬರ್!

ಜ್ಹಾ ಜ್ಹಾ ಗಬರ್
PR
ಹಾಲಿವುಡ್ ದಂತ ಕಥೆ ಲಿಜ್ ಟೇಲರ್ ಸಾವಿನ ಸುದ್ಧಿ ಕೇಳಿದ್ದ ಮತ್ತೊಬ್ಬಳು ನಟಿ ಜ್ಹಾ ಜ್ಹಾ ಗಬರ್ ಆಘಾತಕ್ಕೊಳಗಾಗಿದ್ದಾರೆ. ಜೀವಣ್ಮರಣ ಸ್ಥಿತಿಯಲ್ಲಿರುವ ಈ ನಟಿ ಸಾವಿನ ಮುಂದಿನ ಸರದಿ ನನ್ನದೇ ಎಂದಿದ್ದಾರೆ.

ತೊಂಬತ್ತ ನಾಲ್ಕು ವರ್ಷದ ಗಬರ್ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಮತ್ತು ಮನೆಯಲ್ಲೇ ಕಾಲ ಕಳೆದಿದ್ದಾರೆ. ಈ ಕಾರಣದಿಂದ ತನ್ನ ಸಾವೂ ಸಮೀಪಿಸುತ್ತಿದೆ ಎಂದು ನಂಬಿದ್ದಾರೆ.

'ಖ್ಯಾತನಾಮರು ಸಾಯುವಾಗ ಮೂವರು-ಮೂವರಾಗಿ ಸಾಯುತ್ತಾರೆ. ಮುಂದಿನ ಸರದಿ ನನ್ನದು' ಎಂದು ಗಬರ್ ಹೇಳಿರುವುದಾಗಿ ಅವರ ಪತಿ ಫ್ರೆಡರಿಕ್ ಪ್ರಿನ್ಜ್ ವನ್ ಅನ್ಹಲ್ಟ್ ಅವರು ರಾಡರ್ ಆನ್‌ಲೈನ್‌ನಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ನ್ಯೂ ಯಾರ್ಕ್ ಡೈಲಿ ವರದಿ ಮಾಡಿದೆ.

ಮಾರ್ಚ್ 21ರಂದು ಖ್ಯಾತ ಪಿಯಾನೊ ವಾದಕ ಜೋಸೆಫ್ ವಿಲಿಯಂ ಪರ್ಕಿನ್ಸ್ ಅವರು ಮತ್ತು 23ರಂದು ಲಿಜ್ ಟೇಲರ್ ಅವರು ನಿಧನರಾಗಿದ್ದರು. ಈ ಕಾರಣದಿಂದ ಮುಂದಿನ ಸಾವು ನನ್ನದಾಗಲಿದೆ ಎಂದು ಉಚ್ಚರಿಸಿದ್ದಾರೆ.

ಮೊದಲೇ ಖಾಯಿಲೆಯಿಂದ ಬಳಲಿದ್ದ ಗಬರ್, ನಟಿ ಲಿಜ್ ಟೇಲರ್ ಅವರ ನಿಧನದ ಸುದ್ಧಿಯಿಂದ ಒಮ್ಮೆಲೆ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಅವರ ರಕ್ತದ ಒತ್ತಡ ಒಮ್ಮೆಲೆ ಏರಿಕೆಯಾಗಿದೆ ಎಂದು ಅವರ ಪತಿ ತಿಳಿಸಿದ್ದಾರೆ.

Share this Story:

Follow Webdunia kannada