Select Your Language

Notifications

webdunia
webdunia
webdunia
webdunia

ಮಾಡೆಲ್ ಕೇಟ್ ಇದೀಗ ವಸ್ತ್ರ ವಿನ್ಯಾಸಕಿ

ರೂಪದರ್ಶಿ ಕೇಟ್ ಮಾಸ್
ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ರೂಪದರ್ಶಿ ಕೇಟ್ ಮಾಸ್, ಈಗ ತನ್ನ ಮದುವೆಗೂ ವಸ್ತ್ರವಿನ್ಯಾಸ ಮಾಡಲಿದ್ದಾರೆ. ಜುಲೈ ತಿಂಗಳಲ್ಲಿ ಪ್ರಿಯತಮ ಹಾಗೂ ಗಿಟಾರ್ ವಾದಕ ಜಿಮಿ ಹಿನ್ಸ್‌ನನ್ನು ವರಿಸಲಿದ್ದಾರೆ.

ಕೇಟ್ ಸ್ನೇಹಿತ ಹಾಗೂ ವಸ್ತ್ರ ವಿನ್ಯಾಸಕರಾಗಿರುವ ವಿವಿಯನ್ನೆ ವೆಸ್ಟ್‌‍ವುಡ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ಡೈಲಿ ಮೇಲ್ಸ್ ವರದಿ ಮಾಡಿವೆ.

ಮದುವೆ ವಸ್ತ್ರ ವಿನ್ಯಾಸ ಮಾಡಲು ನಿಮ್ಮನ್ನು ಸಮೀಪಿಸಲಾಗಿತ್ತೇ ಎಂಬ ಮಾದ್ಯಮಗಳ ಪ್ರಶ್ನೆಗೆ 'ಹಾಗೇನಿಲ್ಲ, ನನಗನಿಸುತ್ತಿದೆ ಇದನ್ನು ಆಕೆ ಖುದ್ದಾಗಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಫ್ಯಾಶನ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೇಟ್‌ಗೆ ಬಟ್ಟೆಯ ಬಗ್ಗೆ ಪರಿಜ್ಞಾನವೂ ಇದೆ. ಇದಕ್ಕೂ ಮಿಗಿಲಾಗಿ ಆಕೆ ಏನು ಮಾಡುತ್ತಿದ್ದಾಳೆಂದು ಆಕೆಗೆ ಅರಿವಿದೆ. ನನ್ನ ಸಹಾಯದ ಅಗತ್ಯ ಆಕೆಗಿಲ್ಲ' ಎಂದು ಕಳೆದ 15 ವರ್ಷಗಳಿಂದ ಕೇಟ್‌ಗೆ ವಸ್ತ್ರ ವಿನ್ಯಾಸಗೊಳಿಸುತ್ತಾ ಬಂದಿರುವ 70ರ ಹರೆಯದ ವಿವಿಯನ್ನೆ ವೆಸ್ಟ್ ವುಡ್ ಪ್ರತಿಕ್ರಿಯಿಸಿದರು.

ಮೂರೂವರೆ ವರ್ಷಗಳಿಂದ ಸ್ನೇಹ ಬಾಂಧವ್ಯ ಬೆಳೆಸಿದ್ದ ಕೇಟ್-ಹಿನ್ಸ್ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನಡೆದಿತ್ತು. ಇದೀಗ ಮದುವೆಗೂ ಸ್ವತಃ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

Share this Story:

Follow Webdunia kannada