ಈ ರೀತಿಯಲ್ಲಿ ಕಲ್ಪಿಸಿಕೊಳ್ಳುವುದು ಅಂತಿಂಥಾ ರಸಿಕ ದಂಪತಿಯ ಲಕ್ಷಣವಲ್ಲ. ಇದು ಒಂದು ವೇಳೆ ಪ್ರಚಾರದ ಮರ್ಮವೋ ಏನೋ ಎಂಬಂತೆ ಗುಮಾನಿ ಏಳುತ್ತದೆಯಾದರೂ, ಪಾಪ್ ಗಾಯಕಿ ಮರಿಯಾ ಕ್ಯಾರಿ ಮತ್ತು ಹಾಲಿವುಡ್ ನಟ ನಿಕ್ ಕ್ಯಾನೊನ್ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಮೇರಿಕಾದ ಮಾದ್ಯಮವೊಂದು ವರದಿಮಾಡಿದೆ.
ತಮ್ಮ ಮನೆಯ ಗೋಡೆಯ ಮೇಲೆಲ್ಲಾ ಇವರಿಬ್ಬರ ನಗ್ನ ಚಿತ್ರಗಳೇ ರಾರಾಜಿಸುತ್ತಿರಬೇಕು. ಒಂದರ್ಥದಲ್ಲಿ ಹೇಳಬೇಕೆಂದರೆ ಅಜಂತಾ ಎಲ್ಲೋರಾದ ಗುಹೆಯ ಗೋಡೆ-ಗೋಡೆಯಲ್ಲೂ ಮನ ಕೆರಳಿಸುವ ಶಿಲ್ಪಕಲಾಕೃತಿ ಇರುವಂತೆ ತಮ್ಮ ಮನೆಯೊಳಗೇ ತಮ್ಮದೇ ನಗ್ನ ಚಿತ್ರಗಳು ಕಂಗೊಳಿಸಬೇಕೆಂಬುದು ಈ ನವ ಕಲಾ ದಂಪತಿಯ ಆಕಾಂಕ್ಷೆ. ರಾಜರ ವಂಶದಲ್ಲಿ ಹುಟ್ಟಿ ಕಲ್ಪಿಸಿಕೊಳ್ಳಬೇಕಾದ ಕಲ್ಪನೆಗಳು ಅಚಾನಕ್ಕಾಗಿ ಹಾಲಿವುಡ್ ಕಲಾವಿದರ ಮನದಲ್ಲಿ ಮೊಳೆತಿರುವುದು ರೋಮಾಂಚನದ ಸಂಗತಿ!
ಆದರೆ ಈ ವಿಚಾರ ಇನ್ನೂ ದೃಢವಾಗಿಲ್ಲ ಎಂದು ಪತಿರಾಯ ನಿಕ್ ಕ್ಯಾನೊನ್ ತಿಳಿಸಿದ್ದಾರೆ. ಅದಕ್ಕವರು ಕೊಟ್ಟ ಕಾರಣ ತಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ಇಂತಹ ಛಾಯಾಚಿತ್ರಗಳನ್ನು ನೋಡಿ ತಬ್ಬಿಬ್ಬಾದರೆ ಎಂಬುದು. ಹಾಗೂ, ಮಕ್ಕಳು ತಮ್ಮ ಗೆಳೆಯರೊಂದಿಗೆ ಈ ಚಿತ್ರವನ್ನು ನೋಡಿ ಮುಜುಗರಕ್ಕೊಳಗಾದರೆ ಅಂತ ಯೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲು ಚಿಂತಿಸಬೇಕಾಗಿದೆ ಎಂದಿದ್ದಾರೆ ಹಾಲಿವುಡ್ ನಟ.