Select Your Language

Notifications

webdunia
webdunia
webdunia
webdunia

ಮಗುವಿನೊಂದಿಗೇ ಆಸ್ಕರ್‌ಗೆ ಬರುತ್ತೇನೆ: ಎಮಿ ಆಡಮ್ಸ್

ಎಮಿ ಆಡಮ್ಸ್
ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಮಗಳ ಜತೆ ಸೇರಿ ಆನಂದಿಸಲಿರುವುದಾಗಿ ಹೆಸರಾಂತ ನಟಿ ಹಾಗೂ ಗಾಯಕಿ ಎಮಿ ಆಡಮ್ಸ್ ತಿಳಿಸಿದ್ದಾರೆ.

ಸಹಾಯಕ ಪಾತ್ರಕ್ಕಾಗಿ 'ಅತ್ಯುತ್ತಮ ನಟಿ'ಗಿರುವ ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಡೆದಿರುವ ಎಮಿ ಈ ಬಾರಿ ಪ್ರಬಲ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದು, ಪ್ರಶಸ್ತಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಆಸ್ಕರ್ ನೈಟ್ ಫೆಬ್ರವರಿ 27 ರಂದು ನಡೆಯಲಿದೆ. ಈ ವರ್ಣರಂಚಿತ ಪ್ರಶಸ್ತಿ ಸಮಾರಂಭಕ್ಕೆ ಏನು ಯೋಜನೆ ಹಾಕಿದ್ದೀರಾ..? ಎಂಬ ಪತ್ರಕರ್ತರ ಪ್ರಶ್ನೆಗೆ 'ತನ್ನ ಮಗು ಅವಿಯಾನಳೊಂದಿಗೇ ಸಮಾರಂಭವನ್ನು ಆನಂದಿಸುತ್ತೇನೆ' ಎಂದು ಪಕ್ಕಾ ಸಂಸಾರಸ್ಥೆಯ ಶೈಲಿಯಲ್ಲಿಯೇ ಎಮಿ ಆಡಮ್ಸ್ ಉತ್ತರಿಸಿದ್ದಾರೆ.

ಈ ಬಾರಿ ನನ್ನ ಪುಟ್ಟ ಮಗುವನ್ನು ಎತ್ತಿಕೊಂಡೇ ಆಸ್ಕರ್ ವೇದಿಕೆಯಲ್ಲಿ ಸುತ್ತಾಡಲಿದ್ದೇನೆ. ಒಂಬತ್ತು ತಿಂಗಳ ಮಗು ನನ್ನ ಜತೆಗಿರುವುದರಿಂದ ಪ್ರಸಕ್ತ ವರ್ಷ ನನ್ನ ಪಾಲಿಗೆ ಮತ್ತಷ್ಟು ಶ್ರೇಷ್ಠವೆನಿಸಿದೆ ಎಂದು ಈ ಹಿಂದೆ ಎರಡು ಬಾರಿ ಆಸ್ಕರ್ ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಡೆದಿರುವ ಎಮಿ ಆಡಮ್ಸ್ ತಿಳಿಸಿದ್ದಾರೆ.

ಮಾತು ಮುಂದುವರಿಸಿದ ಅವರು, ನನ್ನನ್ನು ಮತ್ತು ಸಮಾರಂಭದ ಎಲ್ಲಾ ಹಾಗುಹೋಗುಗಳನ್ನು ನನ್ನ ಮಗಳು ಕೂಡಾ ನೋಡುತ್ತಿರುತ್ತಾಳೆ ಎನ್ನುವುದೇ ವಿಶೇಷ ಎಂದಿದ್ದಾರೆ.

Share this Story:

Follow Webdunia kannada