Select Your Language

Notifications

webdunia
webdunia
webdunia
webdunia

ಬ್ರಿಡ್ಜ್‌ನಿಂದ ಹಾರಿ ಆತ್ಮಹತ್ಯೆಗೆ ಶರಣಾದ ನಿರ್ದೇಶಕ ಟೋನಿ

ಟಾಪ್ ಗನ್
ಲಾಸ್ ಏಂಜಲೀಸ್ , ಸೋಮವಾರ, 20 ಆಗಸ್ಟ್ 2012 (18:10 IST)
PR
'ಟಾಪ್ ಗನ್' ಮತ್ತು 'ಎನಿಮಿ ಆಫ್ ದ ಸ್ಟೇಟ್' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳ ಬ್ರಿಟನ್ ನಿರ್ಮಾಪಕ ಟೋನಿ ಸ್ಕೋಟ್ ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

68ರ ಹರೆಯದ ಟೋನಿ ಸ್ಕೋಟ್ ಆತ್ಮಹತ್ಯೆಗೆ ಮುನ್ನ ಬರೆದಿಟ್ಟ ಡೆತ್ ನೋಟ್ ಅವರ ಕಾರಿನಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಟೋನಿಯವರು ಸೇತುವೆಯಿಂದ ಕೆಳಕ್ಕೆ ಹಾರಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.

ಭಾನುವಾರ ಮಧ್ಯಾಹ್ನ 12-30ರ ವೇಳೆಗೆ ಟೋನಿ ಸಾನ್ ಪೆಡ್ರೋ ಮತ್ತು ಟರ್ಮಿನಲ್ ಐಲ್ಯಾಂಡ್ ಬಳಿಯಿರುವ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟೋನಿಯವರ ಡೆತ್ ನೋಟ್ ಅವರ ಟೊಯೋಟಾ ರಿಸ್ ಕಾರಿನಲ್ಲಿ ಪತ್ತೆಯಾಗಿದ್ದು, ಕಾರನ್ನು ಸೇತುವೆಯ ಸಮೀಪದಲ್ಲೇ ನಿಲ್ಲಿಸಲಾಗಿತ್ತು.

ಟೋನಿ ಸ್ಕಾಟ್ ಕಳದೆ ನಾಲ್ಕು ದಶಕಗಳಲ್ಲಿ ಬೆವರ್ಲಿ ಹಿಲ್ಸ್ ಕಾಪ್ II, ಎನಿಮಿ ಆಫ್ ದ ಸ್ಟೇಟ್, ದ ಟಾಕಿಂಗ್ ಆಫ್ ಪೆಲ್‌ಹಾಮ್ 123, ದ ಲಾಸ್ಟ್ ಬಾಯ್ ಸ್ಕೌಟ್, ಕ್ರಿಮ್ಸ್‌ಸನ್ ಟೈಡ್, ಅನ್ ಸ್ಟಾಪೇಬಲ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

Share this Story:

Follow Webdunia kannada