Select Your Language

Notifications

webdunia
webdunia
webdunia
webdunia

ಬ್ರಿಟನ್ ರಾಜಕುವರನ ಹನಿಮೂನ್ ಅನುಭವ!

ಪ್ರಿನ್ಸ್ ವಿಲಿಯಂ
ಹತ್ತು ದಿನದ ಹನಿಮೂನ್ ಮುಗಿಸಿ ಹಿಂತಿರುಗಿದ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸೆಸ್ ಕ್ಯಾತರಿನ್, ಅದೊಂದು ಮರೆಯಲಾಗದ ಅದ್ಭುತ ಅನುಭವ ಎಂದುಕೊಂಡಿದ್ದಾರೆ. ಉತ್ತರ ಐಲ್ಯಾಂಡ್‌ನಲ್ಲಿ ತಮ್ಮ ಹನಿಮೂನ್ ಆಯೋಜಿಸಿದ್ದ ಬ್ರಿಟನ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಸೈಚೆಲ್ಲೆಸ್ ದ್ವೀಪಗಳಲ್ಲಿ ಅತ್ಯಂತ ವೈಭವೊಪೇತ ವ್ಯವಸ್ತೆಗಳನ್ನು ರಾಜ ದಂಪತಿಗಳಿಗೆ ಸರ್ಕಾರ ಆಯೋಜಿಸಿತ್ತು. ಅವರು ಸಂಜರಿಸುತ್ತಿದ್ದ ಗಂಟೆಗೆ 64 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ಐಶಾರಾಮಿ ಬೋಟ್‌ನ ಒಂದು ವಾರದ ಬಾಡಿಗೆ 26ಸಾವಿರ ಪೌಂಡ್!

ಇನ್ನು ರಾಜಕುಮಾರ ದಂಪತಿಗಳಿಗೆ ಇಷ್ಟವಾದದ್ದು ನೀರಿನಲ್ಲಿ ಮುಳುಗೇಳುತ್ತಿದ್ದ ಜಲಚರಗಳು ಮತ್ತು ಅಲ್ಲಿನ ವನ್ಯಜೀವಿಗಳು. 'ಅಲ್ಲಿನ ವಿಶಿಷ್ಟ ಪ್ರಾಣಿಸಂಕುಲಗಳು ನಮ್ಮ ಕುತೂಹಲವನ್ನು ಇನ್ನಷ್ಟು ಕೆರಳಿಸುತ್ತಿತ್ತು' ಎಂದು ರಾಜಕುಮಾರ ಹೇಳಿಕೊಂಡಿರುವುದನ್ನು ಮಾದ್ಯಮಗಳು ವರದಿ ಮಾಡಿವೆ.

Share this Story:

Follow Webdunia kannada