ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟನೆ ಹಾಗೂ ಉತ್ತಮ ನೈಜ ಕಥಾಚಿತ್ರದ ಪ್ರಶಸ್ತಿಗಳನ್ನು 'ದಿ ಕಿಂಗ್ಸ್ ಸ್ಪೀಚ್' ಚಿತ್ರ ಬಾಚಿಕೊಂಡಿದೆ.
ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಸ್ವೀಕರಿಸಿದ 'ದಿ ಕಿಂಗ್ಸ್ ಸ್ಪೀಚ್' ನಿರ್ದೇಶಕ ಟಾಮ್ ಹೂಪರ್, ಸಭಿಕರನ್ನುದ್ದೇಶಿಸಿ 'ತಾಯಿಯ ಮಾತನ್ನು ಗಮನವಿಟ್ಟು ಕೇಳಿ ಎನ್ನುವುದೇ ಚಿತ್ರದ ಕಥೆಯಲ್ಲಿರುವ ನೀತಿಸಾರ' ಎಂದಿದ್ದಾರೆ.
ಉತ್ತಮ ಕಥಾಚಿತ್ರಕ್ಕೆ ಡೇವಿಡ್ ಸೀಯ್ಡ್ಲರ್ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ಕಾಲಿನ್ ಫಿರ್ತ್ ಅವರಿಗೆ ಸಂದಿದೆ. 'ದಿ ಕಿಂಗ್ಸ್ ಸ್ಪೀಚ್' ಬ್ರಿಟನ್ನ ನಾಲ್ಕನೇ ರಾಜ ಜಾರ್ಜ್ನ ನೈಜ ಕಥೆಯನ್ನಾದರಿಸಿದೆ.