Select Your Language

Notifications

webdunia
webdunia
webdunia
webdunia

ನಟಿ ಇವಾ ಮೆಂಡ್ಸ್ ಬೆತ್ತಲೆ ಚಿತ್ರ ಕಳವು

ಹಾಲಿವುಡ್
ಹಾಲಿವುಡ್ ಬೆಚ್ಚಗಿನ ನಟಿ ಇವಾ ಮೆಂಡ್ಸ್ ಅವರ ಬೆತ್ತಲ ಚಿತ್ರಗಳು ಕಳವಿಗೀಡಾದ ಘಟನೆ ಸಂಭವಿಸಿದೆ. ವಿವಿಧ ಭಂಗಿಗಳಲ್ಲಿನ ಆಕೆಯ ಆರು ಬೆತ್ತಲೆ ಚಿತ್ರಗಳನ್ನು ಕಲಾಪ್ರದರ್ಶನವೊಂದಕ್ಕೆ ಸಾಗಿಸುವ ವೇಳೆ ಕಳವು ನಡೆದಿದೆ ಎಂದು ವರದಿಯಾಗಿದೆ.

ಲಾಸ್ ಎಂಜಲೀಸ್‌ನಲ್ಲಿ ಈ ವಾರಂತ್ಯದಲ್ಲಿ ನಡೆಯಲಿರುವ ಕಲಾ ಸಮಾರಂಭವೊಂದರಲ್ಲಿ ತನ್ನ ಬೆತ್ತಲ ಚಿತ್ರಗಳನ್ನು ಪ್ರದರ್ಶನಕ್ಕಿಡಲು, ಮಾದಕ ನಟಿ ಇವಾ ಮೆಂಡ್ಸ್ ಛಾಯಾಗ್ರಾಹಕ ಲಿಂಡನ್ ಚುಬ್ಬುಕ್‌ಗೆ ವಿವಿಧ ಭಂಗಿಗಳಲ್ಲಿ ಬೆತ್ತಲೆ ಫೋಸ್ ನೀಡಿದ್ದರು.

ಆದರೆ ಫೋಟೋ ಪ್ರಿಂಟ್ ಮಾಡಿಸಿ ತಂದಾಗ ಮತ್ತೇರಿಸುವ ಆರು ಮಾದಕ ಚಿತ್ರಗಳು ಕಣ್ಮರೆಯಾಗಿದ್ದವು. ಇದರಿಂದ ದಂಗಾದ ಛಾಯಾಗ್ರಾಹಕ ಚುಬ್ಬುಕ್‌ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನೇನು, ಇನ್ಸುರೆನ್ಸ್ ಉದ್ದೇಶಕ್ಕಾದರೂ ದೂರು ನೀಡಲೇಬೇಕಾಗಿದೆ ಎಂದಿರುವ ಚುಬ್ಬುಕ್, 'ಇವಾ ಫೋಟೋಕ್ಕಾಗಿ ಪೊಲೀಸರೇನು ಚುರುಕು ಕಾರ್ಯಾಚರಣೆ ನಡೆಸುತ್ತಿಲ್ಲ' ಎಂದು ತಗಾದೆ ಎತ್ತಿದ್ದಾರೆ.

ಆದರೆ... ಅಮೂಲ್ಯ ಛಾಯಾಚಿತ್ರಗಳು ಕಳವಾಗಿದ್ದರೂ, ಇನ್ನೂ ಕಾಲ ಮಿಂಚಿಲ್ಲ. ಅದೇ ಚಿತ್ರಗಳನ್ನು ಮರು ಮುದ್ರಿಸಿದರೆ, ಮೆಂಡ್ಸ್ ಮತ್ತು ಚುಬ್ಬುಕ್ ನಿರ್ಧರಿಸಿದಂತೆ ಕಲಾ ಸಮಾರಂಭದಲ್ಲಿ ಪ್ರದರ್ಶನಕ್ಕಿಡಬಹುದಾಗಿದೆ.

Share this Story:

Follow Webdunia kannada