Select Your Language

Notifications

webdunia
webdunia
webdunia
webdunia

'ಟೈಟಾನಿಕ್' ಹೀರೋ ನನ್ನ ಆಪತ್‌ಬಾಂಧವ; ಕೇಟ್‌

ಕೇಟ್ ವಿನ್ಸ್ಲೆಟ್
'ಟೈಟಾನಿಕ್' ನಾಯಕಿ ಕೇಟ್ ವಿನ್ಸ್‌ಲೆಟ್‌ರ ಆತ್ಮೀಯ ಗೆಳೆಯ ಲಿಯಾನಾರ್ಡೊ ಡಿಕಾಪ್ರಿಯೋ ಅವರ ಬಗ್ಗೆ ಮನಬಿಚ್ಚಿದ್ದಾರೆ.

1997ರ ಯಶಸ್ವಿ ಚಿತ್ರ 'ಟೈಟಾನಿಕ್' ನಿಂದ ಆರಂಭವಾದ ನಮ್ಮ ಗೆಳೆತನ ಇಂದಿಗೂ ಗಾಢವಾಗಿ ಉಳಿದಿದೆ. ಕೇವಲ ಟೈಟಾನಿಕ್ ಚಿತ್ರದ ಆತ್ಮಹತ್ಯಾ ಯತ್ನ ಸನ್ನಿವೇಶದಲ್ಲಿ ಮಾತ್ರ ಆತ ನನ್ನನ್ನು ಕಾಪಾಡಿಲ್ಲ. ನಿಜಜೀವನದಲ್ಲೂ ಆತ ನನಗೆ ಆಪತ್‌ಬಾಂಧವ ಎಂದಿದ್ದಾರೆ ಟೈಟಾನಿಕ್ ನಾಯಕಿ ಕೇಟ್ ವಿನ್ಸ್‌ಲೆಟ್.

'ತನ್ನ ಪತಿ ಸ್ಯಾಮ್ ಮೆಂಡ್ಸ್‌ನೊಂದಿಗೆ ಸಂಸಾರ ತ್ಯಜಿಸಿ ವೇದನೆಯಲ್ಲಿದ್ದಾಗ ನನಗೆ ಒತ್ತಾಸೆಯಾಗಿ ನಿಂತದ್ದು ಆತ' ಎಂದು 36 ವರ್ಷದ ಲಿಯಾನಾರ್ಡೊ ಡಿಕಾಪ್ರಿಯೋನನ್ನು ಕೊಂಡಾಡಿದ್ದಾರೆ.

ಈ ಜಗತ್ತಿನ ಎಲ್ಲರಿಗಿಂತಲೂ ಹೆಚ್ಚಾಗಿ ಆತನಿಗೆ ನನ್ನ ಬಗ್ಗೆ ಗೊತ್ತಿದೆ. ಸಾಮಾನ್ಯವಾಗಿ ಪುರುಷ ಗೆಳೆಯರು ಎಂದರೆ ಒರಟುತನ, ಚೆಲ್ಲಾಟ ಇರುತ್ತದೆ. ಆದರೆ ಲಿಯೊ ಮತ್ತು ನನ್ನ ನಡುವೆ ಅಂತದೇನಿಲ್ಲ. ನಮ್ಮ ನಡುವೆ ಆರೋಗ್ಯ ಪೂರ್ಣ ಸಂಬಂಧವಿದೆ. ಆತ ನನ್ನ ಆಪತ್‌ಬಾಂಧವ, ಆತನೇ ನನ್ನ ಬಲ ಎಂದಿದ್ದಾರೆ 'ಟೈಟಾನಿಕ್' ನಾಯಕಿ ಕೇಟ್.

Share this Story:

Follow Webdunia kannada