Select Your Language

Notifications

webdunia
webdunia
webdunia
webdunia

ಟೈಟಾನಿಕ್ ಸುಂದರಿಗೆ ಈಗ ಸೌಂದರ್ಯದ ಚಿಂತೆಯಂತೆ!

ಟೈಟಾನಿಕ್
ಹಾಲಿವುಡ್ , ಶನಿವಾರ, 29 ಜೂನ್ 2013 (11:18 IST)
PR
PR
ಟೈಟಾನಿಕ್ ಸುಂದರಿ ಕೇಟ್ ವಿನ್ಸ್ಲೆಟ್ ಅವರನ್ನು ಒಮ್ಮೆ ನೋಡಿದವರು ಮರೆಯುವುದು ಕಷ್ಟವೇ. ಅವರ ಸೌಂದರ್ಯವೇ ಅಂತಹುದು. ಟೈಟಾನಿಕ್ ಬಳಿಕ ಅವರ ಯಾವ ಚಿತ್ರವೂ ಸದ್ದು ಮಾಡದೇ ಇದ್ದುದರಿಂದ ಅವರು ಚಿತ್ರರಂಗದಿಂದ ಸ್ವಲ್ಪ ದೂರವಾಗಿದ್ದಾರೆ.

ಅವರಿಗೆ ವಯಸ್ಸಾಗಿದೆ, ಮುಖದ ಮೇಲೆ ನೆರಿಗೆಗಳು ಮೂಡುತ್ತಿವೆ ಎಂಬ ಕಾರಣಕ್ಕೆ ಅವಕಾಶಗಳು ಸಿಗುತ್ತಿಲ್ಲ ಎಂದುಕೊಂಡಿದ್ದಾರೆ ಕೇಟ್. ಆದರೆ ಈ ಬಾರಿ ವಯಸ್ಸು ಮರೆಮಾಚಲು ಅವರು ಮೊರೆಹೋಗಿದ್ದು ಶಸ್ತ್ರಚಿಕಿತ್ಸೆಯನ್ನಲ್ಲ, ಬದಲಾಗಿ ಸೌಂದರ್ಯವರ್ಧಕಗಳನ್ನಂತೆ.

ನಿಸರ್ಗದತ್ತ ವಸ್ತುಗಳಿಂದ ತಯಾರಾಗುವ ಆಯಂಟಿ ಏಜಿಂಗ್ ಕ್ರೀಮ್ ಮತ್ತು ಜೆಲ್ಗಳ ಬಳಕೆಯಿಂದ ಮಹಿಳೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮತ್ತು ಮುಖದ ತಾಜಾತನ ಉಳಿಸಿಕೊಳ್ಳಬಹುದು. ಇವು ಮುಖದ ಅಂದವನ್ನು ಇಮ್ಮಡಿಗೊಳಿಸುತ್ತವೆ ಎಂದು 37ರ ಹರೆಯದ ಕೇಟ್ ಅಭಿಪ್ರಾಯಪಟ್ಟಿದ್ದಾರೆ.

ಮಿಯಾ ಹಾಗೂ ಜೋ ಎಂಬ ಇಬ್ಬರು ಮಕ್ಕಳ ತಾಯಿಯಾಗಿರುವ ಕೇಟ್ ವಿನ್ಸ್ಲೆಟ್ ಅವರಿಗೆ ಮೇಕಪ್ಗಾಗಿ ಬಹಳ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲವಂತೆ. ಬೆಳಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವ ಹೊತ್ತಿಗೆ ಸಾಕಾಗಿರುತ್ತದೆ. ನಂತರ ನಾನು ಸಿದ್ಧವಾಗಬೇಕು. ಹೀಗಾಗಿ ನೈಸರ್ಗಿಕ ಉತ್ಪನ್ನಗಳನ್ನೇ ಬಳಸಿಕೊಂಡು ಯಂಗ್ ಆಗಿ ಕಾಣುವ ದಾರಿ ಹುಡುಕುತ್ತಿದ್ದೇನೆ ಎಂದಿದ್ದಾರೆ ಕೇಟ್.

Share this Story:

Follow Webdunia kannada