Select Your Language

Notifications

webdunia
webdunia
webdunia
webdunia

ಕಳ್ಳತನ ಆರೋಪದಲ್ಲಿ ಹಾಲಿವುಡ್ ನಟಿ

ಹಾಲಿವುಡ್
ಹಾಲಿವುಡ್ ನಟಿ ಲಿಂಡ್‌ ಸೆ ಕಳ್ಳತನ ಆರೋಪ ಎದುರಿಸುತ್ತಿದ್ದಾರೆ. 24 ವರ್ಷದ ಈ ನಟಿ ಜನವರಿ 22 ರಂದು ಕ್ಯಾಲಿಫೂರ್ಣಿಯಾದ ಪ್ರಸಿದ್ಧ ಆಭರಣ ಮಳಿಗೆಗೆ ಯುವಕನೊಂದಿಗೆ ಭೇಟಿನೀಡಿದ್ದರು ಎಂದು ವರದಿಯಾಗಿದೆ.

ಕಂಫೊಫೈ ಎಂಡ್ ಕಂಪನಿ ಎಂಬ ಪ್ರಸಿದ್ಧ ಚಿನ್ನಾಭರಣ ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಈ ಕಳ್ಳತನದ ವಿಡಿಯೊ ತುಣುಕು ದಾಖಲಾಗಿದೆ.

ಲಿಂಡ್‌ ಸೆ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿರುವ ನೆಕ್‌ಲೆಸ್ 1.29 ಸಾವಿರ ಮೌಲ್ಯದ್ದು ಎಂದು ಆಭರಣ ಮಾಲೀಕರು ನ್ಯಾಯಾಲಯವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ತಪ್ಪೊಪ್ಪಿಕೊಂಡು ಏನೇನು ನಿವೇದಿಸಿಕೊಂಡರೂ ಶಿಕ್ಷೆ ಅನುಭವಿಸಲೇಬೇಕು ಎಂದು ನ್ಯಾಯಾಧೀಶೆ ಹೇಳಿರುವುದನ್ನು ದಿ ಸನ್ ಪತ್ರಿಕೆ ವರದಿ ಮಾಡಿದೆ.

ನಟಿ ಲೂಹಾನ್ 2007 ರಲ್ಲಿ ಕುಡಿದು ವಾಹನ ಚಾಲಿಸಿ ಸಂಕಷ್ಟಕ್ಕೆ ಸಿಲುಕಿದ್ದರು.

Share this Story:

Follow Webdunia kannada