Select Your Language

Notifications

webdunia
webdunia
webdunia
webdunia

ಈ ಪಾಪ್ ತಾರೆಗೆ ಎಂಥಾ ಹುಡುಗನಾದರೂ ಓಕೆ ಅಂತೆ!

ಟೇಲರ್ ಸ್ವಿಫ್ಟ್
PR
ತನ್ನ ನೈಜ ಜೀವನದಲ್ಲೂ ವಿಶಿಷ್ಟ ಪ್ರೀತಿಯನ್ನು ಬಯಸುತ್ತಿರುವ 'ಲವ್ ಸ್ಟೋರಿ' ಆಲ್ಬಂ ಖ್ಯಾತಿಯ ಇಪ್ಪತ್ತೊಂದು ವರ್ಷದ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್, ತನ್ನನ್ನು ಯಾರು ಬೇಕಾದರೂ ಪ್ರೀತಿಸಬಹುದು ಎಂದು ಪ್ರೇಮ ನಿವೇದನೆಗೆ ಆಹ್ವಾನ ನೀಡಿದ್ದಾರೆ. ಹುಡುಗ ಹೇಗೆ ಬೇಕಾದ್ರು ಇರಲಿ, ಅಂದ ಚೆಂದ ಯಾವುದನ್ನೂ ನೋಡುವುದಿಲ್ಲ ಎಂದಿರುವ ಸ್ವಿಫ್ಟ್, ತಾನು ಪರರ ಸಹವಾಸ ಮಾಡುವಾಗ ಅಥವಾ ಮತ್ತೊಬ್ಬರನ್ನು ಪ್ರೀತಿಸುವಾಗ ಅಡ್ಡಿಬರಬಾರದು ಅಷ್ಟೆ ಎಂಬುದು ಈ ಗಾಯಕಿಯ ಷರತ್ತು.

ಇತ್ತೀಚೆಗೆ ನಟ ಜೇಕ್ ಗಿಲೆನ್ ಹಾಲ್ ಮತ್ತು ಜೋಯ್ ಜೊನಾಸ್ ಜತೆಗೆ ಲವಿಡವಿ ಮೊಟಕುಗೊಳಿಸಿದ್ದ ಟೇಲರ್ ಸ್ವಿಫ್ಟ್‌ಗೆ ಅಂತಿಂಥವರೇ ಬೇಕೆಂಬ ನಿಯಮವೇನಿಲ್ಲ ಎಂದು ಡೈಲಿ ಸ್ಟಾರ್ ಆನ್‌ಲೈನ್ ವರದಿ ಮಾಡಿದೆ.

ಪ್ರೀತಿ ವಿಷಯಕ್ಕೆ ಬಂದಾಗ ಅಲ್ಲಿ ನೀತಿ-ನಿಯಮ ಯಾವುದೂ ಇಲ್ಲ. ನಮ್ಮನ್ನು ಯಾರು ಪ್ರೀತಿಸುತ್ತಿದ್ದಾರೆ ಎಂದು ನಮಗೆ ಗೊತ್ತಿರುವುದಿಲ್ಲವಾದ್ದರಿಂದ, ನನ್ನ ಮನಸ್ಸನ್ನು ಚಕಿತಗೊಳಿಸಿಕೊಳ್ಳಲು ಅವಕಾಶ ಮಾಡಿಕೊಡಲು ಈ ಪ್ರಯತ್ನ ಮಾಡುತ್ತಿದ್ದೇನೆ ಎನ್ನುವ ಈಕೆ, ನಮ್ಮ ಜೀವನ ಸಂಗಾತಿಯಾಗಿ ಯಾರು ಬರುತ್ತಾರೆ ಎಂದು ಯಾರಿಗೆ ಗೊತ್ತು ಎಂದೂ ಪ್ರಶ್ನಿಸುತ್ತಾರೆ.

ಹಾಗೆಯೇ ಸಂಬಂಧ ಮೊಟಕುಗೊಳಿಸಲು ಹಿಂದು ಮುಂದು ನೋಡುವ ವಿಚಾರವೇ ಇಲ್ಲ. ಆತ ಎಂತಹ ಕಾಯಕ ಮಾಡುತ್ತಿರಲಿ, ಎಂತಹ ಸುರಸುಂದರಾಂಗನೇ ಆಗಿರಲಿ ಮುಲಾಜಿಲ್ಲದೆ ಬಿಟ್ಟುಬಿಡುವುದು ನನ್ನ ಗುಣ ಎನ್ನುವ ಟೇಲರ್ ಸ್ವಿಫ್ಟ್‌ಗೆ ಪುರುಷನೊಂದಿಗೆ ಕಳೆದ ಅನುಭವ ಮುಖ್ಯವಾಗಬೇಕು ಎನ್ನುತ್ತಾರೆ.

ತನ್ನ ಖಾಸಗಿ ವಿಚಾರಗಳ ಬಗ್ಗೆ ಹೆಣೆದಿರುವ ಗೀತೆಯನ್ನು ಒಳಗೊಂಡ ಹೊಸ ಆಲ್ಬಂ ನ್ನು ಹೊರತರಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದೇನೆ ಎಂದಿರುವ ಟೇಲರ್ ಸ್ವಿಫ್ಟ್‌, ಪ್ರಸಿದ್ಧ 'ಓವ್ಲ್‌ಸಿಟಿ' ಆಲ್ಬಂ ನ ಪಾಪ್ ಗಾಯಕ ಆಡಂ ಯಂಗ್ ಮತ್ತು ತಾನು ಒಟ್ಟಾಗಿ ಹಾಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಕೊನೆಗೆ ತಾನೊಬ್ಬಳು ಹಗಲುಗನಸು ಕಾಣುವ ತುಂಬಾ ವಿಶ್ವಾಸವುಳ್ಳ ಹೆಣ್ಣು. ಸದಾ ಸಂತೋಷದಿಂದಲೇ ಇರಬೇಕೆಂಬುದು ನನ್ನ ಅಭಿಲಾಷೆ. ಈ ಕಾರಣದಿಂದಲೇ ನನ್ನ ಗೀತೆಗಳ ಕೊನೆಯಲ್ಲಿ ಹರುಷದ ಸಾಲನ್ನು ಸೇರಿಸುವ ಅಭ್ಯಾಸ ರೂಢಿಸಿಕೊಂಡಿದ್ದೇನೆ ಎಂದು ಮಾತು ಮೊಟಕುಗೊಳಿಸುತ್ತಾರೆ ಸ್ವೀಟ್ ಸ್ವಿಫ್ಟ್.

Share this Story:

Follow Webdunia kannada