ಡೇವಿಡ್ ಬೆಕ್‌ಹ್ಯಾಮ್ ಮತ್ತು ಪತ್ನಿ ವಿಕ್ಟೋರಿಯಾ ಇನ್ನು ತಾನೆ ಹುಟ್ಟಬೇಕಿರುವ ತನ್ನ ಹೆಣ್ಣು ಮಗುವಿಗೆ ಈಗಾಗಲೇ ಹೆಸರು ಸಿದ್ಧಪಡಿಸಿದ್ದಾರೆ. ಹೆಸರು 'ಲುನಾ'. ಅದರರ್ಥ ಚಂದಿರ. ನಮ್ಮವರು ಚಂದ್ರಾವತಿ, ಚಂದ್ರಿಕಾ ಅಂತೆಲ್ಲಾ ಹೆಸರಿಡಲ್ವಾ ಹಾಗೆ. ಆದರೆ ವಿಶೇಷ ಅಂದ್ರೆ ಈ ದಂಪತಿ ಮಗು ಹುಟ್ಟುವ ಮೊದಲೇ ಹೆಸರಿಟ್ಟಿದ್ದಾರೆ!
ಲುನಾ ಅಂದರೆ ಸ್ಪಾನಿಷ್ ಬಾಷೆಯಲ್ಲಿ ಚಂದಿರನಂತೆ. ಹುಟ್ಟಲಿರುವ ಮಗು ಹೆಣ್ಣೊ ಗಂಡೋ ಎಂದು ತಿಳಿಯುವ ಮೊದಲು ಈ ಮಾಜಿ ಮಾದಕ ನಟಿ ವಿಕ್ಟೋರಿಯಾ ಊಹಿಸಿದ್ದ ಹೆಸರೇನು ಗೊತ್ತೆ 'ಕ್ರೂಸ್ ಲುನಾ'. ಹೆಣ್ಣು ಮಗುವೆಂದು ಗೊತ್ತಾದ ತಕ್ಷಣ ಹೆಸರಿನ ಅರ್ಧ ಭಾಗ ತೆಗೆದು ಲುನಾ ಎಂದು ತನ್ನ ಬಟ್ಟೆಯಂತೆಯೇ ಸಣ್ಣದಾಗಿಸಿಕೊಂಡಿದ್ದಾರೆ ವಿ ಕ್ಟೋ ರಿ ಯಾ.