Select Your Language

Notifications

webdunia
webdunia
webdunia
webdunia

ಅಷ್ಟೊಂದು ಪ್ರಶಸ್ತಿ ಇದ್ದರೂ ಹೆದರಿಕೆಯಿಂದಲೇ ಬದುಕಿದ್ದ ಫ್ರೀಡಾ!

ಸ್ಲಂ ಡಾಗ್ ಮಿಲಿಯನೇರ್
IFM
ಎಂಟು ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ನಾಯಕಿ ಫ್ರೀಡಾ ಪಿಂಟೋ, ಅಮೋಘ ಯಶಸ್ಸಿನ ನಂತರ ಅವಕಾಶ ವಂಚಿತಳಾಗಿ ಹೆದರಿಕೆಯಿಂದಲೇ ಕಾಲಕಳೆದಿದ್ದರಂತೆ.

'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಯಾವುದೇ ಅವಕಾಶವಿಲ್ಲದೆ ಚಿಂತಾಕ್ರಾಂತಳಾಗಿದ್ದೆ ಎಂದು ಹೇಳಿರುವ ಇಪ್ಪತ್ತಾರು ವರ್ಷದ ಈ ನಟಿ, ನನ್ನ ಬಳಿ ತುಂಬಾ ಪ್ರಶಸ್ತಿಗಳಿದ್ದವು ಆದರೆ ಅದರಿಂದ ಏನೂ ಆಗಲಿಕ್ಕಿಲ್ಲ ಎಂಬ ಹೆದರಿಕೆಯಿಂದಲೇ ಬದುಕಿದ್ದೆ ಎಂದಿದ್ದಾರೆ.

ಅವಕಾಶಕ್ಕಾಗಿ ಕಾಯುತ್ತಿದ್ದ ಫ್ರೀಡಾಗೆ 'ರೈಸ್ ಆಫ್ ದ ಎಪ್ಸ್' ಚಿತ್ರಕ್ಕೆ ನಟಿಸಲು ಆಹ್ವಾನ ಬಂದಿತ್ತು. ಆ ಸಂದರ್ಭದಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಜೇಮ್ಸ್ ಫ್ರಾಂನ್ಕೊ ನಾಯಕನಾಗಿ ನಟಿಸಲಿರುವ ಈ ಚಿತ್ರ ನೈಜ ಕಥೆಯನ್ನಾದರಿಸಿದೆ.

Share this Story:

Follow Webdunia kannada