Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಬ್ರಿಟ್ನಿಯ ತುಂಟ ಉತ್ತರ

ಬ್ರಿಟ್ನಿ ಸ್ಪಿಯರ್ಸ್
ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಅವರ ನೂತನ ಆಲ್ಬಂ 'ಹೋಲ್ಡ್ ಇಟ್ ಎಗೈನ್‌ಸ್ಟ್‌ ಮಿ' ಪ್ರಥಮ ಬಾರಿಗೆ ಎಂಟಿವಿ ಯಲ್ಲಿ ಪ್ರಸಾರವಾದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಅಭಿಪ್ರಾಯಗಳ ಮಹಾವೂರವನ್ನೆ ಹರಿಸಿದ್ದಾರೆ.

ತನ್ನ ಅಭಿಮಾನಿಗಳ ಅಭಿಪ್ರಾಯಕ್ಕೆ ಬ್ರಿಟ್ನಿ ಸ್ಪಿಯರ್ಸ್ ಕೂಡ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. "ಶ್ರೇಷ್ಠ ನಿರ್ದೇಶಕ ಜೊನಾಸ್ ಅಕರ್‌ಲಂಡ್ ಅವರ ನಿರ್ದೇಶನದ 'ಹೋಲ್ಡ್ ಇಟ್ ಎಗೈನ್‌ಸ್ಟ್‌ ಮಿ' ಆಲ್ಬಂ ಅನ್ನು ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ನಿಮ್ಮ ಮುಂದೆ ತಂದಿದ್ದೇನೆ. ನೀವದನ್ನು ಮೆಚ್ಚುತ್ತೀರೆಂದು ಭಾವಿಸಿದ್ದೇನೆ. ಇಲ್ಲದಿದ್ದರೆ, ತನ್ನ ವೀಡಿಯೋದಲ್ಲಿ ಕೋಳಿಮರಿಯನ್ನು ಒದ್ದಂತೆ ಕುಂಗ್‌ಫು ಶೈಲಿಯಲ್ಲಿ ನಿಮ್ಮನ್ನು ಒದ್ದು ಬಿಡುತ್ತೇನೆ" ಎಂದು ಬ್ರಿಟ್ನಿ ತನ್ನ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತುಂಟತನ, ಸ್ವಲ್ಪ ಪೋಲಿ ಸಾಹಿತ್ಯ ಹೊಂದಿರುವ 'ಹೋಲ್ಡ್ ಇಟ್ ಎಗೈನ್‌ಸ್ಟ್‌ ಮಿ' ಆಲ್ಬಂನಲ್ಲಿ ಬ್ರಿಟ್ನಿ ವಿವಿಧ ಭಂಗಿಯಲ್ಲಿ ನರ್ತಿಸಿದ್ದಾರೆ.

Share this Story:

Follow Webdunia kannada