Select Your Language

Notifications

webdunia
webdunia
webdunia
webdunia

ಅಜ್ಞಾತ ಶಕ್ತಿಯ ಆರ್ಭಟ 'ಬ್ಯಾಟಲ್ ಆಫ್ ಲಾಸ್ ಏಂಜಲೀಸ್'

ಬ್ಯಾಟಲ್ ಆಫ್ ಲಾಸ್ ಏಂಜಲೀಸ್
PR
ಅಜ್ಞಾತ ಶಕ್ತಿಯ ಆರ್ಭಟವನ್ನು ಅಲ್ಪ-ಸ್ಪಲ್ಪ ಆಧಾರದೊಂದಿಗೆ ವೈಜ್ಞಾನಿಕವಾಗಿ ಮತ್ತು ಸಾಹಸಮಯವಾಗಿ ತೆಗೆಯಲಾಗಿರುವ 'ಬ್ಯಾಟಲ್ ಆಫ್ ಲಾಸ್ ಏಂಜಲೀಸ್'. ನೂರು ದಶಲಕ್ಷ ಡಾಲರ್ ಅದ್ದೂರಿ ವೆಚ್ಚದ ಬಹುನಿರೀಕ್ಷೆಯ ಹಾಲಿವುಡ್ ಚಿತ್ರ. ಇದು ಇದೇ ತಿಂಗಳ 11ರ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆ ಕಾಣಲಿದೆ.

ಎರಡನೇ ವಿಶ್ವ ಸಮರದ ವೇಳೆ ನಡೆಯಿತೆನ್ನಲಾದ ಅಜ್ಞಾತ ಶಕ್ತಿಯ ದಾಳಿಯ ಕುರಿತು ಈ ಚಿತ್ರ ಮೂಡಿಬಂದಿದೆ.

ವಿಶ್ವದ ಎಲ್ಲಾ ಪ್ರದೇಶಗಳು ಈ ಅಜ್ಞಾತ ಶಕ್ತಿಯ ದಾಳಿಗೆ ತುತ್ತಾಗಿ ನಾಶವಾಗಿ, ಇನ್ನೇನು ಲಾಸ್ ಏಂಜಲೀಸ್ ನಗರವನ್ನೂ ದಾಳಿಮಾಡುವ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಎದುರಿಸುವ ಸಂಕಷ್ಟ ಹಾಗೂ ಲಾಸ್ ಏಂಜಲೀಸ್‌‌ ನಗರವನ್ನು ಉಳಿಸಿಕೊಳ್ಳಲು ನಡೆಸುವ ಶತಪ್ರಯತ್ನಗಳನ್ನು ಸಾಹಸಮಯವಾಗಿ ಚಿತ್ರಿಸಲಾಗಿದೆ.

ಭೌಗೋಳಿಕ ತಜ್ಞರು, ಆಧ್ಯಾತ್ಮಿಕ ಗುರುಗಳು, ಜ್ಯೋತಿಷ್ಯ ಸಂಶೋಧಕ ತಜ್ಞರ ಅಭಿಪ್ರಾಯದಂತೆ ಈ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಅನಾಚಾರಗಳಿಗೆ (ವೈಜ್ಞಾನಿಕ, ಸಾಮಾಜಿಕ) ಭೂಮಿಯಲ್ಲಿರುವ ಅಜ್ಞಾತ ಶಕ್ತಿ ಮೌನವಾಗಿಯೇ ಪ್ರತಿಭಟಿಸುತ್ತದೆ.

ಈ ಸಂಬಂಧ ಬಾಹ್ಯಾಕಾಶ ಅಧ್ಯಯನ ನಡೆಸುತ್ತಿರುವ ಅಮೇರಿಕಾದ ಸಂಸ್ಥೆ ಫಿಗು ತನ್ನ ವಿಸ್ತೃತ ಅದ್ಯಯನವನ್ನು ನಡೆಸುತ್ತಾ ಬಂದಿದೆ.

'ದಿ ಸೈಲೆಂಟ್ ರೆವಲ್ಯೂಷನ್ ಆಫ್ ಟ್ರುಥ್' ಚಿತ್ರಣ ಸೇರಿದಂತೆ ಬ್ಯೂನಸ್‌‌ ಏರಿಸ್, ಸಿಯೋಲ್, ಫ್ರಾನ್ಸ್, ಜರ್ಮನಿ, ಚೀನಾ ಮುಂತಾದ ಪ್ರದೇಶಗಳಲ್ಲಿ ನಡೆದ ಯುಎಫ್ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್- ಹಾರಾಡುವ ತಟ್ಟೆ) ದಾಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನೂ ಆಧರಿಸಿ ಚಿತ್ರಕ್ಕೆ ಮತ್ತಷ್ಟು ಪುಷ್ಟಿ ನೀಡಲಾಗಿದೆ.

ದೃಶ್ಯಗಳಲ್ಲಿ ನೈಜತೆಯನ್ನು ತರಲು ಅತ್ಯಾಧುನಿಕ ಕ್ಯಾಮರಾ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಹಾಗೂ ಯುದ್ಧದ ಸನ್ನಿವೇಶಗಳಿಗೆ ಜೀವ ತುಂಬಲು ನೌಕಾನೆಲೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕ್ಯಾಲಿಫೋರ್ನಿಯಾದ ನೌಕಾ ಸೇನೆಯ ನೆರವನ್ನು ಪಡೆಯಲಾಗಿದೆ. ಕೆಲವಾರು ಪ್ರದೇಶದ ಯುದ್ಧನೌಕೆಗಳನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಅಜ್ಞಾತ ಆಕಾಶ ಕಾಯಗಳ ದಾಳಿಯನ್ನು ಇಲ್ಲಿ ಯುದ್ಧ ವಿಮಾನಗಳ ಮೂಲಕ ತೋರಿಸಲು ನಿರ್ದೇಶಕರು ಯತ್ನಿಸಿದ್ದಾರೆ.

ಚಿತ್ರವನ್ನು ಜೊನಾಥನ್ ಲೀಬಸ್‌ಮನ್ ನಿರ್ದೇಶಿಸಿದ್ದು, ಕ್ರಿಸ್ಟೋಫರ್ ಬರ್ಟೊಲಿನಿ ಕಥೆ (ನೈಜತೆಯನ್ನಾಧರಿಸಿ) ಹೆಣೆದಿದ್ದಾರೆ. ನಟರಾದ ಏರೋನ್ ಎಕ್‌ಹಾರ್ಟ್, ಮೈಕೆಲೊ ರಾಡ್ರಿಗಸ್, ಮಿಕಾಯಿಲ್ ಪೆನಾ, ನೆ-ಯೊ, ಹಾಗೂ ಬ್ರಿಡ್‌ಗೆಟ್ ಮೆಯ್ನಹನ್ ಮುಖ್ಯಪಾತ್ರದಲ್ಲಿದ್ದಾರೆ.

Share this Story:

Follow Webdunia kannada