Webdunia - Bharat's app for daily news and videos

Install App

ಕೊನೆಗೂ ಮೌನ ಮುರಿದ ಸಮಂತಾ- ಸಂಸಾರದ ಬಗ್ಗೆ ಹೇಳಿದ್ದೇನು ಗೊತ್ತಾ?

Webdunia
ಗುರುವಾರ, 26 ಆಗಸ್ಟ್ 2021 (10:20 IST)
Samantha: ಸಮಂತಾ ಅವರ ಟ್ವಿಟರ್ ಖಾತೆಯ ಹೆಸರು ಬದಲಾವಣೆ.  ಮದುವೆಗೂ ಮುನ್ನ ಸಮಂತಾ ರುತ್ ಪ್ರಭು ಎಂದಿದ್ದ ಹೆಸರನ್ನು ನಂತರ ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಆದರೆ, ಇದೀಗ ಟ್ವಿಟರ್ ಖಾತೆಯ ಹೆಸರು ಬರಿ   ಎಸ್ ಎಂದು ಇದೆ.

Tollywood: ಕಳೆದ ಕೆಲವು ದಿನಗಳಿಂದ ಟಾಲಿವುಡ್ ನಟಿ ಸಮಂತಾ ಮತ್ತು ನಾಗಚೈತನ್ಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಗುಸುಗುಸು ಕೇಳಿ ಬಂದಿತ್ತು. ಇದಕ್ಕೆ ಕಾರಣ , ಸಮಂತಾ ಅವರ ಟ್ವಿಟರ್ ಖಾತೆಯ ಹೆಸರು ಬದಲಾವಣೆ.  ಮದುವೆಗೂ ಮುನ್ನ ಸಮಂತಾ ರುತ್ ಪ್ರಭು ಎಂದಿದ್ದ ಹೆಸರನ್ನು ನಂತರ ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಆದರೆ, ಇದೀಗ ಟ್ವಿಟರ್ ಖಾತೆಯ ಹೆಸರು ಬರಿ   ಎಸ್ ಎಂದು ಇದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.  ಸಮಂತಾ ಮತ್ತು ನಾಗಚೈತನ್ಯ ದೂರವಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಆದರೆ  ಬಗ್ಗೆ ಸಮಂತಾ ಆಗಲಿ ಅಥವಾ ನಾಗಚೈತನ್ಯ ಸೇರಿದಂತೆ ಅಕ್ಕಿನೇಮಿ ಕುಟುಂಬದ ಯಾವ ಸದಸ್ಯರೂ ಇದುವರೆಗೂ ತುಟಿ ಬಿಚ್ಚಿರಲಿಲ್ಲ, ಆದರೆ ಇದೀಗ ಆ ಬಗ್ಗೆ  ಸಮಂತಾ ಮೌನ ಮುರಿದಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ, 'ಯಾವುದೇ ವಿವಾದ ಅಥವಾ ಟ್ರೋಲ್ಗಳಿಗೆ ನನಗೆ ಪ್ರತಿಕ್ರಿಯಿಸಬೇಕು ಎಂದು ಎನಿಸಿದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಯಾರೋ ಪ್ರತಿಕ್ರಿಯೆ ನೀಡಿ ಎಂದು ಹೇಳಿದ ಮಾತ್ರಕ್ಕೆ  ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ವಿಚಾರಗಳನ್ನು ಚರ್ಚಿಸುವ ಬಗ್ಗೆ ನನಗೆ ಆಸಕ್ತಿ ಮತ್ತು ಇಷ್ಟವಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಹೇಗೆ ಹೇಳುವುದಕ್ಕೆ ಅವರಿಗೆ ಹೇಗೆ ಹಕ್ಕು ಇದೆಯೋ, ಹಾಗೇ ನನಗೂ ಹಕ್ಕು ಇದೆ' ಎಂದು ಖಾರವಾಗಿ  ಪ್ರತಿಕ್ರಿಯಿಸಿದ್ದಾರೆ.
ಕೆಲ ಮೂಲಗಳ ಪ್ರಕಾರ ಫ್ಯಾಮಿಲಿ ಮ್ಯಾನ್ ಸೀಸನ್ 2 ನಲ್ಲಿ ಸಮಂತಾ ನಟಿಸಿದ್ದರು, ಅದರಲ್ಲಿನ ಅವರ ಪಾತ್ರ ಅಕ್ಕಿನೇನಿ ಕುಟುಂಬಕ್ಕೆ ಇಷ್ಟವಾಗಿರಲಿಲ್ಲ, ಇದೇ ಕಾರಣಕ್ಕೆ ನಾಗಚೈತನ್ಯ ಮತ್ತು ಸಮಂತಾ ನಡುವೆ ಬಿರುಕು ಮೂಡಿತ್ತು ಎನ್ನಲಾಗುತ್ತಿದೆ. ಇನ್ನು ಮದುವೆ ಬಳಿಕವೂ ಸಮಂತಾ ಚಿತ್ರರಂಗದಲ್ಲಿ  ಸಕ್ರಿಯರಾಗಿದ್ದಾರೆ. 2017ರಲ್ಲಿ ಸೂಪರ್ ಸ್ಟಾರ್ ನಾಗರ್ಜುನ ಅವರ ಪುತ್ರ, ನಟ ನಾಗಚೈತನ್ಯ ಅಕ್ಕಿನೇನಿ ಜೊತೆಗೆ ಮದುವೆಯಾದ ಸಮಂತಾ 'ಯೇ ಮಾಯ ಚೇಸಾವೆ' ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿಯಾಗಿದ್ದರು. ಇತ್ತೀಚೆಗೆ 'ದಿ ಫ್ಯಾಮಿಲಿ ಮ್ಯಾನ್ 2' ಮೂಲಕ ಒಟಿಟಿಯಲ್ಲಿ ಸಹ ಜನಪ್ರಿಯರಾಗಿದ್ದಾರೆ. ಅಲ್ಲದೇ ಸ್ಯಾಮ್ ಜಾಮ್ ಎನ್ನುವ ಟಾಕಿಂಗ್ ಶೋ ಮೂಲಕ ಸಮಂತಾ ಟಾಲಿವುಡ್ ಕಿರುತೆರೆಯಲ್ಲಿ ಮಿಂಚಿದ್ದರು.  ಸದ್ಯ ಸಮಂತಾ ಸಿನಿಮಾಗಳ ವಿಚಾರಕ್ಕೆ ಬಂದರೆ  'ಶಾಕುಂತಲಂ' ಸೇರಿದಂತೆ 2-3 ಚಿತ್ರಗಳಲ್ಲಿ  ಅವರು ಬ್ಯೂಸಿಯಾಗಿದ್ದಾರೆ.
ಅಲ್ಲದೇ ಸಂದರ್ಶನದಲ್ಲಿ ನನಗೆ ದೊಡ್ಡ ಅಭಿಮಾನಿ ಬಳಗವಿದೆ, ಅವರ ಪ್ರೀತಿ ನನ್ನ ಜೊತೆಗೆ ಇದೆ. ಆದರೆ ನನ್ನ ಮತ್ತು ವೃತ್ತಿ ಆಯ್ಕೆಗಳ ನಡುವೆ ಅಭಿಮಾನಿಗಳನ್ನಾಗಲಿ ಅಥವಾ ಬೇರೆ ಯಾರನ್ನೇ ಆಗಲಿ ನಾನು ಯಾವತ್ತಿಗೂ ಸೇರಿಸುವುದಿಲ್ಲ ಎಂದು ಖಡಕ್ ಆಗಿ ಸಮಂತಾ ಉತ್ತರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments