ಸಾಮಾನ್ಯವಾಗಿ ಹೆಣ್ಣು ಮಕ್ಕಳು ವಿವಾಹದ ಬಳಿ ತಮ್ಮ ಸರ್ ನೇಮ್ ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮ ಹೆಸರಿನ ಮುಂದೆ ಗಂಡನ ಹೆಸರು ಸೇರಿಕೊಳ್ಳೋದು ಸಾಮಾನ್ಯವಾಗಿದೆ. ಇದಕ್ಕೆ ಬಾಲಿವುಡ್ ನಟಿಯರು ಹೊರತಾಗಿಲ್ಲ. ಬಾಲಿವುಡ್‌ನಲ್ಲೂ ಇಂತಹ ಅನೇಕ ಉಹಾದರಣೆಗಳಿವೆ, ಕರೀನಾ ಕಪೂರ್ ಖಾನ್, ಐಶ್ವರ್ಯಾ ರೈ ಬಚ್ಚನ್ ಹೀಗೆ ಉದಾಹರಣೆಗಳು ಅನೇಕ ಇವೆ. ಆದ್ರೆ ನಟಿ ಪ್ರೀತಿ ಝಿಂಟಾ ಮಾತ್ರ ಹೀಗಲ್ಲ.
ಮೊನ್ನೆಯಷ್ಟೇ ಪ್ರೀತಿ ತನ್ನ ಗೆಳೆಯನ ಗುಡ್ ಜೀನ್‌ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಪ್ರೀತಿ ತನ್ನ ಸರ್ ನೇಮ್‌ನ್ನು ಬದಲಾಯಿಸಿ ಕೊಳ್ಳುತ್ತಾರೋ ಇಲ್ವೋ ಅನ್ನೋ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳಿದ್ದವು.
ಆದ್ರೆ ಪ್ರೀತಿ ಆ ಕುತೂಹಲಕ್ಕೆ ಈಗ ತೆರೆ ಎಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ನನ್ನ ತಂದೆಯ ಮಗಳು, ಈಗ ಬೇರೊಬ್ಬರ ಪತ್ನಿಯಾಗಿರಬಹುದು.
ಆದ್ರೆ ಇಷ್ಟು ವರ್ಷ ನನ್ನನ್ನು ಸಾಕಿ ಬೆಳೆಸಿದ್ದು ನನ್ನ ಅಪ್ಪ. ಹಾಗಾಗಿ ನಾನು ಈಗ ಪತಿಗೋಸ್ಕರ ನನ್ನ ಸರ್‌ನೇಮ್‌ನ್ನು ಬದಲಾಯಿಸಿಕೊಳ್ಳೋದಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ,
ಇನ್ನು ಪ್ರೀತಿಯ ಪತಿಯ ಹೆಸರಿನ ಬಗ್ಗೆಯೂ ನಾನಾ ರೀತಿ ಜೋಕ್ ಮಾಡಲಾಗುತ್ತೆ ಅಂತಾ ಅವರೇ ಹೇಳಿದ್ದಾರೆ. ಅಲ್ಲದೇ ವೈವಾಹಿಕ ಜೀವನ ಚೆನ್ನಾಗಿ ಸಾಗುತ್ತಿದೆ ಅಂತಾ ಅವರು ತಿಳಿಸಿದ್ದಾರೆ.