Publish Date: Thu, 05 Jun 2014 (09:47 IST)
Updated Date: Thu, 05 Jun 2014 (09:49 IST)
ಎಂಜಲಿನ ಜೋಲಿ ಹಾಲಿವುಡ್ ನ ಅಪರೂಪದ ನಟಿ. ತನ್ನ ರೂಪ ಮತ್ತು ಸಮಾಜ ಸೇವೆಯಿಂದ ಹೆಚ್ಚು ಗಮನ ಸೆಳೆದಿದ್ದಾರೆ ವಿಶ್ವದಲ್ಲಿ. ಅದೇರೀತಿ ಆಕೆ ತನ್ನ ಕಾಯಿಲೆಯ ಮುಖಾಂತರವೂ ಸಹ ಎಲ್ಲರು ಆಕೆಯ ನಿರ್ಧಾರ ಮೆಚ್ಚುವಂತೆ ಮಾಡಿ ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಪ್ರಸ್ತುತ ಎಂಜಲಿನ ಜೋಲಿ ನಟನೆಗೆ ವಿದಾಯ ಹೇಳುವತ್ತ ತಮ್ಮ ಗಮನ ನೆಟ್ಟಿದ್ದಾರೆ. ಅವರ ನಟನೆಯ ಚಿತ್ರಗಳು ಇನ್ನು ಕೆಲವೇ ಕೆಲವು ಮಾತ್ರ ಅಭಿಮಾನಿಗಳು ನೋಡಲು ದೊರಕುತ್ತದೆ.
ಪ್ರಸ್ತುತ ಎಂಜಲಿನ ಜೋಲಿ ವಿಶ್ವದ ಅಪರೂಪದ ಸುಂದರಿ ಕ್ಲಿಯೋಪಾತ್ರ ಅವರ ಪಾತ್ರ
ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈಜಿಪ್ಟ್ ದೇಶದ ಈ ಸುಂದರ ಚಕ್ರವರ್ತಿನಿ ಕಥೆಯ ಬಗ್ಗೆ ಮತ್ತು ರೂಪದ ಬಗ್ಗೆ ವಿಶ್ವದ ಎಲ್ಲರಿಗೂ ಸಿಕ್ಕಾಪಟ್ಟೆ ಆಸಕ್ತಿ ಇದೆ. ಪ್ರಾಯಶಃ ಇದು ಎಂಜಲಿನ ಅವರ ಕಟ್ಟಕಡೆಯ ಚಿತ್ರವಾಗಲಿದೆ. ಚಿತ್ರಕ್ಕೆ ಎರಿಕ್ ರೂಥ್ ಸಂಭಾಷಣೆ ಬರೆಯುತ್ತಿದ್ದಾರೆ ಎಂದು ಕಾಂಟಾಕ್ಟ್ ಮ್ಯುಸಿಕ್ ಡಾಟ್ ಕಾಂ ಎನ್ನುವ ವೆಬ್ ಸೈಟ್ ವರದಿ ಮಾಡಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಬಗೆಯ ಐಡಿಯಾಗಳು , ಸಾಕಷ್ಟು ನಿರ್ದೇಶಕರ ಜೊತೆ ಚರ್ಚೆ ಮಾಡಲಾಯಿತಂತೆ. ಅಂತಿಮವಾಗಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುವ ಹೊಣೆಗಾರಿಕೆ ಎರಿಕ್ ರೂಥ್ ಅವರದ್ದಾಗಿದೆ.
ಆತ ಈಕೆಯ ಉತ್ತಮ ಗೆಳೆಯ ಮತ್ತು ಹಾಲಿವುಡ್ ಅತ್ಯುತ್ತಮ ಸಂಭಾಷಣೆಕಾರ ಆಗಿದ್ದಾರೆ. ಇದಕ್ಕೆ ಮುನ್ನ 1963 ರಲ್ಲಿ ಎಲಿಜೆಬೆತ್ ಟೈಲರ್ ಈ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಇಂತಹ ಅದ್ಭುತ ಪ್ರಾಜೆಕ್ಟ್ ಜೋಲಿ ಕೈಗೆತ್ತಿ ಕೊಂಡಿದ್ದಾರೆ. ತನ್ನ ನಟನಾ ಬದುಕಿಗೆ ವಿದಾಯ ಹೇಳುವ ಮುನ್ನ ಅತ್ಯುತ್ತಮ ಅಭಿನಯ ನೀಡುವ ಆಶಯ. ಅದಕ್ಕಾಗಿ ಈ ಪ್ರಯತ್ನ ಎಂದಿದ್ದಾರೆ ಜೋಲಿ. ನಟನೆ ಬಿಟ್ಟ ನಂತರ ಅವರು ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.