Publish Date: Wed, 28 May 2014 (10:07 IST)
Updated Date: Wed, 28 May 2014 (10:09 IST)
ವಿಶ್ವದಲ್ಲೇ ಅತ್ಯಂತ ರೋಮ್ಯಾಂಟಿಕ್ ಹೀರೋಯಿನ್ ಎನ್ನುವ ಅಗ್ಗಳಿಕೆ ಪಡೆದ ನಟಿ ಎಂಜಲಿನ ಜೋಲಿ . ಆಕೆಯು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಿಫಿಷೆಂಟ್ ಸಿನಿಮಾವನ್ನು ಡಿಸ್ನಿ ಡಿಜಿಟಲ್ 3ಡಿ ಫಾರ್ಮೆಟ್ ಸುಮಾರು 12 ನೂರು ಕೋಟಿಯಲ್ಲಿ ನಿರ್ಮಿಸಿದೆ. ಈ ಚಿತ್ರವೂ ಈ ತಿಂಗಳು 30 ರಂದು ಬಿಡುಗಡೆ ಆಗುತ್ತಿದೆ. ಅದಾದ ಎರಡು ವಾರಗಳ ನಂತರ ಹಿಂದಿ , ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.
ಪ್ರತೀಕಾರ, ಹಗೆಯಿಂದ ಕೂಡಿದ ಫ್ಯಾಂಟಸಿ ಚಿತ್ರ ಇದಾಗಿದೆ.ಒಂದು ದೇಶದ ಮಹಾರಾಣಿ ಆಗಿದ್ದ ಜೋಲಿಯನ್ನು ಮತ್ತೊಂದು ದೇಶದ ರಾಜ ಪ್ರೀತಿಸಿ ಮೋಸ ಮಾಡುತ್ತಾನೆ. ಆ ರಾಜನನ್ನು ಅಂತ್ಯಗೊಳಿಸಲು ಜೋಲಿ ಅನೇಕ ಅತಿಂದ್ರೀಯ ಶಕ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾಳೆ.
ಆ ಬಳಿಕ ರಾಜನ ಬಳಿ ಹೋಗಿ ನಿನ್ನನ್ನು ಕೊಂದು ನಾನು ದ್ವೇಷ ಪೂರ್ಣ ಮಾಡಿಕೊಳ್ಳುವುದಿಲ್ಲ ಬದಲಿಗೆ ನಿನ್ನ ಮಗಳು 16 ವರ್ಷದವಳು ಆಗುವಾಗ ಸಾವು ಬದುಕಿನ ನಡುವೆ ಹೋರಾಡು ವಂತಾಗಲಿ ಎಂದು ಶಾಪ ಹಾಕಿ ಬಂದು ಬಿಡ್ತಾಳೆ. ಇಂತಹ ಮಗುವನ್ನು ಅರಣ್ಯದಲ್ಲಿ ಬಿಟ್ಟು ಬರುತ್ತಾನೆ ಆ ರಾಜ. ಆ ಮಗುವು ಜೋಲಿ ಬಳಿ ಬೆಳೆಯುತ್ತದೆ.16 ವರ್ಷಕ್ಕೆ ಆ ಮಗುವಿಗೆ ಆದಾಗ ಸಾವುಬದುಕಿನ ಹೋರಾಟ ಮಾಡುತ್ತದೆ.
ಆಗ ತಾನು ಶಪಿಸಿದ ಮಗುವೆ ಇದು ಎಂದು ಆಕೆಗೆ ಗೊತ್ತಾಗುತ್ತದೆ. ಇದನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವುದೇ ಈ ಚಿತ್ರದ ಕಥಾಸಾರ. ಸಿನಿ ಪ್ರೇಕ್ಷಕರನ್ನು ನಿಸ್ಸಂಶಯವಾಗಿ ಆಕರ್ಷಿಸುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ವಿತರಕರು. 3 ಡಿ ನಿರ್ಮಾಣದಲ್ಲಿ ಆಗಿರುವ ಈ ಚಿತ್ರದಲ್ಲಿ ಜೋಲಿಯ ಗ್ಲಾಮರ್ ಕಡಿಮೆ ಆಗಿಲ್ಲ. ವಾಲ್ಟ್ ಡಿಸ್ನಿ ನಿರ್ಮಿಸಿರುವ ಈ ಚಿತ್ರವನ್ನು ರಾಬರ್ಟ್ ಸ್ಟ್ರಾಂಬರ್ಗ್ ಅವರು ನಿರ್ದೇಶಿಸಿದ್ದಾರೆ.