Publish Date: Sat, 09 Aug 2014 (11:25 IST)
Updated Date: Sat, 09 Aug 2014 (11:28 IST)
ಕೆಲವರು ಸತ್ತರೂ ವಿವಾದಗಳು ಬಿಡೋದಿಲ್ಲ. ಆ ಸಾಲಿಗೆ ವಿಶ್ವದ ಜನಪ್ರಿಯ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಸಹ ಸೇರುತ್ತಾರೆ. ತನ್ನನ್ನು ಸುಮಾರು ನೂರು ಬಾರಿ ಮೈಕೆಲ್ ಜಾಕ್ಸನ್ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆಪಾದನೆಯನ್ನು ಮಾಡಿದ್ದಾರೆ ಜೇಮ್ಸ್ ಸೇಫ್ ಚುಕ್ ಎನ್ನುವ ನಟ. ಇದು ಹಾಲಿವುಡ್ ನಲ್ಲಿ ಬಾರಿ ಸುದ್ದಿಯಾಗಿ ಬದಲಾಗಿದೆ. ಸೆಕ್ಸ್ ಗಾಗಿ ಜಾಕ್ಸನ್ ಸೀಕ್ರೆಟ್ ಕೊಡ್ಸ್ ಬಳಸುತ್ತಿದ್ದರೆಂದು ಜೇಮ್ಸ್ ಕೋರ್ಟ್ ಗೆ ದಾಖಲು ಮಾಡಿದ ದೂರಿನಲ್ಲಿ ಈ ಸಂಗತಿಯನ್ನು ಸಹಿತ ತಿಳಿಸಿದ್ದಾರೆ. 1980 ರಲ್ಲಿ ಮೈಕೆಲ್ ಜಾಕ್ಸನ್ ಜೊತೆ ಪೆಪ್ಪಿ ಜಾಹೀರಾತಿನಲ್ಲಿ ನಟಿಸಿದ್ದ ಜೇಮ್ಸ್ ಕೋರ್ಟ್ಗೆ ಮಾಡಿದ್ದ ಫಿರ್ಯಾದಿನಲ್ಲಿ ಈ ಸಂಗತಿಯನ್ನು ತಿಳಿಸಿದ್ದಾರೆ.
ಅಲ್ಲದೆ ಜೇಮ್ಸ್ ಜೊತೆ ರಹಸ್ಯವಾಗಿ ಮದುವೆ ಆಗಲು ಸಿದ್ಧವಾಗಿದ್ದಲ್ಲದೆ , ಅದಕ್ಕೆ ಅಗತ್ಯವಾದ ಮ್ಯಾರೇಜ್ ಸರ್ಟಿಫಿಕೆಟ್ ಸಹ ಸಿದ್ಧ ಮಾಡಿದ್ದರ ಬಗ್ಗೆಯೂ ಸಹಿತ ಈ ಸಮಯದಲ್ಲಿ ತಿಳಿಸಿದ್ದಾರೆ.ಇದಕ್ಕೆ ಸಂಬಂಧಪಟ್ಟಂತೆ ಆರೋಪಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ಕೋರ್ಟ್ ಗೆ ನೀಡಿದ್ದಾರೆ ಎನ್ನುವ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ ಹಾಲಿವುಡ್ ನಲ್ಲಿ.
ತಮಗಾದ ಅನ್ಯಾಯಕ್ಕೆ ಪರಿಹಾರ ಕೇಳುತ್ತಿದ್ದಾರೆ ಜೇಮ್ಸ್. 20 ವರ್ಷಗಳ ಬಳಿಕ ಜೇಮ್ಸ್ ಬಳಿಕ ಇಂತಹ ಆರೋಪ ಮಾಡುತ್ತಿರುವ ಜೇಮ್ಸ್ ಬಗ್ಗೆ ಅನೇಕ ಸಂದೇಹ ಮೂಡಿದೆ. ಜಾಕ್ಸನ್ ಸತ್ತು ಈಗಾಗಲೇ 5 ವರ್ಷಗಳಾಗಿವೆ. ಆದರೆ ಇಷ್ಟು ದಿನ ಇಲ್ಲದ ಕಥೆ ಈಗ ಯಾಕೆ ಹೊರ ಬಂದಿದೆ ಎನ್ನುವ ಸಂಗತಿ ಸಹಿತ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿಸಿವೆ.2009ರಲ್ಲಿ ಅತಿಯಾದ ಡ್ರಗ್ ಸೇವನೆ ಮಾಡಿದ ಕಾರಣದಿಂದ ಮೈಕೆಲ್ ಜಾಕ್ಸನ್ ಮರಣಿಸಿದ್ದರು ಎನ್ನುವುದು ಜಗತ್ತಿಗೆ ತಿಳಿದ ಸಂಗತಿ ಆಗಿದೆ. ಆದರೆ ಈಗ ಈ ಹೊಸ ಕಥೆಯ ಆರಂಭ ಯಾವ ರೀತಿಯ ಅಂತ್ಯ ಪಡೆಯುತ್ತದೆಯೋ ಎನ್ನುವ ಕುತೂಹಲ ಎಲ್ಲರನ್ನು ಕಾದಿದೆ. ಇದರ ವಿಚಾರಣೆ ಸೆಪ್ಟೆಂಬರ್ 4 ರಿಂದ ಆರಂಭ ಆಗುತ್ತದೆ.