Webdunia - Bharat's app for daily news and videos

Install App

ಅವಾರ್ಡ್ ಕೊಡಲು ಆಸ್ಕರ್ ವೇದಿಕೆಗೆ ಬೆತ್ತಲಾಗಿ ಬಂದ ನಟ ಜಾನ್ ಸೇನಾ

Krishnaveni K
ಸೋಮವಾರ, 11 ಮಾರ್ಚ್ 2024 (14:30 IST)
Photo Courtesy: Twitter
ಲಾಸ್ ಏಂಜಲೀಸ್: ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ನೀಡಲು ನಟ ಜಾನ್ ಸೇನಾ ಬೆತ್ತಲಾಗಿ ಬಂದಿದ್ದಾರೆ. ಅವರ ಫೋಟೋ, ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿ ಘೋಷಣೆ ಮಾಡಲು ನಟ ಜಾನ್ ಸೇನಾ ವೇದಿಕೆ ಬಂದಿದ್ದರು. ಆದರೆ ವೇದಿಕೆ ಬಂದ ಅವರ ಅವತಾರ ನೋಡಿ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ.

ಮೈಮೇಲೆ ತುಂಡು ಬಟ್ಟೆಯೂ ಇಲ್ಲದೇ ಸಂಪೂರ್ಣ ಬೆತ್ತಲಾಗಿ ವೇದಿಕೆಗೆ ಬಂದಿದ್ದಾರೆ. ಸ್ಟೋರಿ ಬೋರ್ಡ್ ನಿಂದ ಕೇವಲ ತಮ್ಮ ಖಾಸಗಿ ಅಂಗಾಂಗವನ್ನು ಮಾತ್ರ ಮುಚ್ಚಿಕೊಂಡು ಬಂದಿದ್ದಾರೆ. ಬಳಿಕ ವೇದಿಕೆಯಲ್ಲಿ ಅವರಿಗೆ ಡಿಸೈನರ್ ಬಟ್ಟೆ ತೊಡಿಸಲಾಗಿದೆ. ಅವರ ಈ ನಡೆ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ.

ಕ್ರಿಯಾತ್ಮಕತೆ ಎನ್ನುವುದು ಬೇಕು, ಆದರೆ ಪ್ರತಿಷ್ಠಿತ ವೇದಿಕೆಗೆ ಬೆತ್ತಲಾಗಿ ಬರುವಷ್ಟಾ ಎಂದು ಕೆಲವರು ಕಿಡಿ ಕಾರಿದ್ದಾರೆ. ಮತ್ತೆ ಕೆಲವರು ಅವರನ್ನು ಬಾಲಿವುಡ್ ನಟರಿಗೆ ಹೋಲಿಸಿ ತಮಾಷೆ ಮಾಡಿದ್ದಾರೆ. ಆಸ್ಕರ್ ವೇದಿಕೆ ಮೇಲೆ ಜಾನ್ ಸೇನಾರಿಂದಾಗಿ ಇಷ್ಟರವರೆಗೆ ನಡೆಯದ ಅಪರೂಪದ ಘಟನೆಯೊಂದು ನಡೆದು ಹೋಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಸಿನಿಮಾ ಕೋಟಿ ಕೋಟಿ ಬಾಚಿಕೊಂಡರು ಸರಳತೆಯಲ್ಲಿ ಒಂಚೂರು ಬದಲಾಗದ ರಾಜ್‌ ಬಿ ಶೆಟ್ಟಿ, ಈ ಫೋಟೇನೇ ಸಾಕ್ಷಿ

ಚಿನ್ನ ಸಾಗಿಸಿ ವಿಮಾನದಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್‌ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ

ವಿಜಯ್ ದೇವರಕೊಂಡ ಬೆನ್ನಲ್ಲೇ ಇಡಿ ಮುಂದೇ ಹಾಜರಾದ ರಾಣಾ ದಗ್ಗುಬಾಟಿ

ವಿಷ್ಣು ಸಮಾಧಿ ನೆಲಸಮ ಬಗ್ಗೆ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡ ಕುಟುಂಬ: ಅನಿರುದ್ಧ್ ಹೇಳಿದ್ದೇನು

ಕಾಟೇರ ದಾಖಲೆಯನ್ನೂ ಮುರಿಯಲಿದೆ ಸು ಫ್ರಮ್ ಸೋ

ಮುಂದಿನ ಸುದ್ದಿ
Show comments