Publish Date: Mon, 05 May 2014 (11:14 IST)
Updated Date: Mon, 05 May 2014 (11:16 IST)
ಹಾಲಿವುಡ್ ಪ್ರಸಿದ್ಧ ಸೆಲೆಬ್ರಿಟಿಗಳ ಮದುವೆ ಈ ತಿಂಗಳು ನಡೆಯುತ್ತಿದೆ. ಕಳೆದ ವರ್ಷ ಇಂಟರ್ ನ್ಯಾಷನಲ್ ಎಂಟರ್ ಟೈನ್ ಮೆಂಟ್ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಈ ಜೋಡಿ ಈಗ ಒಂದಾಗುತ್ತಿದ್ದಾರೆ. ಟೆಲಿವಿಷನ್ ನಟಿ ಕಿಮ್ ಕರ್ಡಿಶಿಯ ಮತ್ತು ಕೆನ್ಯೆ ವೆಸ್ಟ್ ನ್ನು ಮದುವೆ ಆಗುತ್ತಿದ್ದಾಳೆ. ತನ್ನ ಮದುವೆಯ ಸಲುವಾಗಿ ಆಕೆ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದಾಳೆ.
ಆಕೆ ಮದುವೆಗೆ ಮುನ್ನ ಎಂಟು ಕಿಲೋ ಗಳಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾಳೆ. ಈ ಮೊದಲು ತೂಕವನ್ನು ಹೆಚ್ಚಿಸಿಕೊಳ್ಳಲು ಆಕೆ ಸಾಕಷ್ಟು ವರ್ಕ್ ಮಾಡಿದ್ದಳು. ಆದರೆ ಈಗ ಮೀರಿದ ತೂಕವನ್ನು ಮಿತಿಗೊಳಿಸಲು ಸಹ ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಅದಕ್ಕೆಂದು ಆಕೆ ಸೊಪ್ಪು ತರಕಾರಿ, ನೀರು ಸೇವೆನೆಯಲ್ಲಿ ತನ್ನ ಬಾಯಿ ಚಪಲ ಮಿತಿಗೊಳಿಸಿದ್ದಾಳೆ. ಅಷ್ಟೇ ಅಲ್ಲದೆ ಬ್ರೆಡ್ , ಪಾಸ್ತ, ಕಾರ್ಬೋಹೈಡ್ರೆಟ್ ಇರುವ ಆಹಾರಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಅಲ್ಲದೆ ತನ್ನ ಭಾವಿಪತಿ ಕೆನ್ಯೆ ವೆಸ್ಟೆ ಗೂ ಸಹ ಡಯೆಟ್ ಬಗ್ಗೆ ಪಾಠ ಆರಂಭ ಮಾಡಿದ್ದಾಳಂತೆ.
ಹಿಂದೆ ವೆಸ್ಟ್ ಬಳಿ ದಪ್ಪ ಆಗೋಕೆ ಟಿಪ್ಸ್ ತೆಗೆದುಕೊಂಡಿದ್ದ ಈಕೆ ಈಗ ಹೆಚ್ಚಾದ ತೂಕ ಕಡಿಮೆ ಮಾಡಿಕೊಳ್ಳಲು ಸಹ ಆತನ ಸಲಹೆಯತ್ತಲೇ ಗಮನ ನೀಡಿದ್ದಾಳೆ. ಈ ತಿಂಗಳ 24ರಂದು ಬಾಳಪಯಣ ಆರಂಭ ಮಾಡುತ್ತಿರುವ ಈ ಜೋಡಿ ಹಾಲಿವುಡ್ ನ ಎಲ್ಲ ಪ್ರಸಿದ್ಧರಿಗೂ ತಮ್ಮ ಮದುವೆ ಆಹ್ವಾನ ಪತ್ರಿಕೆ ಕಳುಹಿಸಿದ್ದಾರಂತೆ. ಅದರಲ್ಲಿ ಸೇವ್ ದ ಡೇಟ್ ಮೇ 24 ಎಂದು ಎಲ್ಲರಿಗು ಆಮಂತ್ರಣ ಪತ್ರಿಕೆ ನೀಡಿದ್ದಾರೆ ಈ ಜೋಡಿ.