ಲಾಸ್ ಏಂಜಲೀಸ್: ಹಾಲಿವುಡ್ ತಾರೆ ಏಂಜಲೀನಾ ಜೋಲಿಯನ್ನು ಎಫ್ ಬಿಐ ಅಧಿಕಾರಿಗಳು ನಾಲ್ಕು ತಾಸು ವಿಚಾರಣೆಗೊಳಪಡಿಸಿದ್ದಾರೆ. ವಿದೇಶದಲ್ಲಿ ಖಾಸಗಿ ವಿಮಾನದಲ್ಲಿ ನಡೆದ ಘಟನೆ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಏಂಜಲೀನಾ ಮಾಜಿ ಪತಿ ಬ್ರಾಡ್ ಪಿಟ್ ತಮ್ಮ 15 ವರ್ಷದ ಮಗನ ಮೇಲೆ ದೈಹಿಕ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತ ತನಿಖೆಗೆ ಜೋಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ವಿಮಾನದಲ್ಲಿ ನಡೆದ ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಕೇಳಿದ್ದರು ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಇನ್ನೂ ಕೆಲವು ವಾರಗಳ ಕಾಲ ತನಿಖೆ ನಡೆಯಲಿದೆ ಎಂದು ಎಫ್ ಬಿಐ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ