Select Your Language

Notifications

webdunia
webdunia
webdunia
webdunia

ಏಂಜಲಿನಾ ಜೋಲಿ ಏನ್ ತಿಂತಿದ್ದಾರೆ ಅಂತ ನೋಡಿ!

ಏಂಜಲಿನಾ ಜೋಲಿ ಏನ್ ತಿಂತಿದ್ದಾರೆ ಅಂತ ನೋಡಿ!
Mumbai , ಬುಧವಾರ, 22 ಫೆಬ್ರವರಿ 2017 (17:28 IST)
ಹಾಲಿವುಡ್ ನಟಿ ಏಂಜಲೀನಾ ಜೋಲಿ ಮಕ್ಕಳೊಂದಿಗೆ ಬೆರೆತು ಹುಳ ಹುಪ್ಪಟಗಳನ್ನು ಭಕ್ಷಿಸಿದ್ದಾರೆ. ಬ್ರಾಡ್ ಪಿಟ್ ಜತೆಗೆ ವಿಚ್ಛೇದನ ಪಡೆದ ಬಳಿಕ ಅಭಿನಯಿಸುತ್ತಿರುವ ಮೊದಲ ಚಿತ್ರ ಫಸ್ಟ್ ದೇ ಕಿಲ್ಡ್ ಮೈ ಫಾದರ್. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿದ್ದಾರೆ ಏಂಜಲೀನಾ.
 
ಪ್ರಚಾರದ ಭಾಗವಾಗಿ ಕಾಂಬೋಡಿಯಾದಲ್ಲಿ ತನ್ನ ಆರು ಮಕ್ಕಳೊಂದಿಗೆ ಬಿಬಿಸಿ ವರ್ಲ್ಡ್‌ಗೆ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಮಕ್ಕಳೊಂದಿಗೆ ಬೆರೆತು ಜಿರಳೆ, ಜೇಡ, ಚೇಳು ಮುಂತಾದ ಕೀಟಗಳನ್ನು ತಟ್ಟೆಗೆ ಹಾಕಿಕೊಂಡು ತಿಂದು ತೇಗಿದ್ದಾರೆ. ಈಗ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅಭಿಮಾನಿಗಳು ಚಕಿತರಾಗುತ್ತಿದ್ದಾರೆ.
 
ತಮ್ಮ ಅಭಿಮಾನ ನಟಿ ಇದೆಲ್ಲಾ ತಿನ್ನುತ್ತಿದ್ದಾರಾ ಎಂದು ನಂಬುತ್ತಿಲ್ಲ. ಯಾರದೋ ಬಲವಂತಕ್ಕೆ ಅವರು ಈ ರೀತಿ ಮಾಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದ್ದಲ್ಲಿ ಏಂಜಲೀನಾ ಮಾತನಾಡುತ್ತಾ, ಈ ರೀತಿಯ ಭಕ್ಷ್ಯಗಳು ಕಾಂಬೋಡಿಯಾ ಆಹಾರದ ಭಾಗ ಎಂದಿದ್ದಾರೆ. ಯುದ್ಧ ಸಮಯದಲ್ಲಿಈ ರೀತಿಯದ್ದು ತಿಂದು ಹಸಿವು ನೀರಡಿಕೆ ನೀಗಿಸಿಕೊಂಡು ಅವರು ಬದುಕಿದ್ದರು ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುರುವಾರದಿಂದ (ಫೆ.23) ’ಹೆಬ್ಬುಲಿ’ ಬೇಟೆ ಆರಂಭ