Select Your Language

Notifications

webdunia
webdunia
webdunia
webdunia

ಆಸ್ಕರ್ ಸಂಭ್ರಮಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ದೇಶಿ ಗರ್ಲ್

ಆಸ್ಕರ್ ಸಂಭ್ರಮಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ದೇಶಿ ಗರ್ಲ್
Mumbai , ಶನಿವಾರ, 25 ಫೆಬ್ರವರಿ 2017 (21:40 IST)
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಸಖತ್ ಬಿಜಿಯಾಗಿದ್ದಾರೆ. ಈಗ ಪುರುಸೊತ್ತಿಲ್ಲದಷ್ಟು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ. ಕಳೆದ ವರ್ಷ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಸುದ್ದಿ ಮಾಡಿದ್ದರು.
 
ಈಗ ಮತ್ತೆ ದೇಶಿ ಗರ್ಲ್ ಪ್ರಿಯಾಂಕಾ ಆಸ್ಕರ್ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವತಃ ಈ ವಿಷಯವನ್ನು ಪ್ರಿಯಾಂಕಾ ಬಹಿರಂಗಪಡಿಸಿದ್ದಾರೆ. ಹಾಲಿವುಡ್ ನಟ, ಗಾಯಕ ಮಿಕ್ ಜಾಗರ್ ಜತೆಗೆ ವಿಮಾನ ಹತ್ತುತ್ತಿರುವ ಫೋಟೋವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
 
ಕಳೆದ ಬಾರಿ ಡಿಸೈನರ್ ಜುಹೈರ್ ಮುರಾದ್ ವಿನ್ಯಾಸಪಡಿಸಿದ್ದ ಶ್ವೇತವರ್ಣದ ಗೌನ್, ವಜ್ರಖಚಿತ ಓಲೆಗಳೊಂದಿಗೆ ರೆರ್ಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಈ ಬಾರಿ ಯಾವ ರೀತಿ ಕಾಣಲಿದ್ದಾರೆ ಎಂಬುದು ಕಾದುನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಲಯಕ್ಕೆ ನಟ ಶಿವರಾಜ್ ಕುಮಾರ್ ಹಾಜರು