ರೆಸಿಡೆಂಟ್ ಈವಿಲ್-ರಿಟ್ರಿಬ್ಯೂಷನ್(ತ್ರಿ ಡಿ)ಯ ಐದನೇ ಸರಣಿಯ ಹಾಲಿವುಡ್ ಸಿನಿಮಾ ಸೆಪ್ಟೆಂಬರ್ 28ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಇದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದೆ.
ಆಕ್ಷನ್ ಮತ್ತು ಹಾರರ್ ಕಥೆಯನ್ನ ಹೊಂದಿರುವ ಈ ಸಿನಿಮಾವನ್ನು ಪೌಲ್ ಡಬ್ಲ್ಯು.ಎಸ್.ಆಂಡರ್ಸನ್ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ಮಿಲ್ಲಾ ಜೋವ್ವಿಚ್, ಮಿಷೆಲ್ ರೋಡ್ರಿಗಸ್, ಸಿಯೆನ್ನಾ ಗುಲ್ಲೋರೈ, ಕೇವಿನ್ ಡ್ಯುರಾಂಡ್, ಶ್ವಾನ್ ರೋಬರ್ಟ್ಸ್, ಕಾಲಿನ್ ಸಾಲ್ಮನ್ ಇದ್ದಾರೆ.