Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಅರೆಬರೆ ವಸ್ತ್ರ ತೊಟ್ಟ ಚಿತ್ರ ಹೊರಹಾಕಿದ ಕಿಮ್

ಮತ್ತೊಮ್ಮೆ ಅರೆಬರೆ ವಸ್ತ್ರ ತೊಟ್ಟ ಚಿತ್ರ ಹೊರಹಾಕಿದ ಕಿಮ್
, ಬುಧವಾರ, 23 ಅಕ್ಟೋಬರ್ 2013 (13:16 IST)
PR
ತಮ್ಮ ಸೌಂದರ್ಯದಿಂದಲೇ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟ ಕೆಲವೇ ಕೆಲವು ನಟಿಯರಲ್ಲಿ ಕಿಮ್ ಕರ್ದಶಿಯಾನ್ ಕೂಡಾ ಒಬ್ಬರು. ಕಿರುತೆರೆ ನಿರೂಪಕಿಯಾಗಿದ್ದಾಗ ಕೆಲ ತಿಂಗಳ ಹಿಂದೆ ಗರ್ಭಿಣಿಯಾಗಿ ತೆರೆದ ದೇಹವನ್ನು ಪ್ರದರ್ಶಿಸಿ ಅವರು ಸುದ್ದಿಯಾಗಿದ್ದರು.

ನಾರ್ಥ್‌ವೆಸ್ಟ್ ಎಂಬ ಹೆಣ್ಣುಮಗುವಿನ ತಾಯಿಯಾದ ಬಳಿಕ ಈಗ ಮತ್ತೊಮ್ಮೆ ತೂಕ ಕಳೆದುಕೊಂಡು ಸುದ್ದಿ ಮಾಡಿದ್ದಾರೆ. ಅದಕ್ಕಾಗಿ ಹೊಸ ರೀತಿಯ ಆಹಾರ ಪದ್ದತಿ ಫಾಲೋ ಮಾಡುತ್ತಿರುವ ಕಿಮ್ ಕೆಲವೇ ತಿಂಗಳಲ್ಲಿ ತಮ್ಮ ತೂಕ ಕಳೆದುಕೊಂಡಿದ್ದಾರಂತೆ.

ಇದನ್ನು ಎಲ್ಲರಿಗೂ ತಿಳಿಯುವಂತೆ ಮಾಡುವ ಸಲುವಾಗಿ ತೆರೆದ ದೇಹದ ಚಿತ್ರವನ್ನು ಕ್ಲಿಕ್ಕಿಸಿಕೊಂಡು ಅಂತರ್ಜಾಲಕ್ಕೆ ಹಾಕಿ ಮತ್ತೊಮ್ಮೆ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ. ಸ್ವಿಮ್ ಸೂಟ್ ಧರಿಸಿ ಮೊಬೈಲ್ನಿಂದ ತೆಗೆಯಲಾಗಿರುವ ಚಿತ್ರದಲ್ಲಿ ಆಕೆಯ ದೇಹದ ಇಂಚಿಂಚೂ ಕಣ್ಣುಕೋರೈಸುವಂತೆ ಅಚ್ಚೊತ್ತಿವೆ. ಈ ಚಿತ್ರವನ್ನು ಅಂತರ್ಜಾಲದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರಂತೆ.

ಹಾಗೆಂದು ಟ್ವೀಟಿಸಿಕೊಂಡಿದ್ದು ಬೇರಾರೂ ಅಲ್ಲ, ಸ್ವತಃ ಆಕೆಯ ಪತಿ ಕ್ಯಾನೆ ವೆಸ್ಟ್. ಕೆಲವರು ಆಕೆಯ ಈ ಚಿತ್ರವನ್ನು ಮೆಚ್ಚಿಕೊಂಡಿದ್ದರೆ, ಇನ್ನುಳಿದವರು ತನ್ನ ಅಂಕುಡೊಂಕುಗಳನ್ನು ಬೇಕಾದರೆ ಪತಿಗೆ ತೋರಿಸಿಕೊಳ್ಳಲಿ, ಜಗತ್ತಿನೊಂದಿಗೆ ಹಂಚಿಕೊಳ್ಳುವ ಅಗತ್ಯ ಏನಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಆಕೆಗೆ ಪ್ರಚಾರದ ಹುಚ್ಚು ಇನ್ನೂ ಹೋಗಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

Share this Story:

Follow Webdunia kannada