ನಟಿ ಟಬು, ಇರ್ಫಾನ್ ಖಾನ್ ನಟಿಸಿದ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ
ಲಾಸ್ಏಂಜಲೀಸ್ , ಸೋಮವಾರ, 25 ಫೆಬ್ರವರಿ 2013 (17:16 IST)
ಇರ್ಫಾನ್ ಖಾನ್ ಹಾಗೂ ಟಬು ಅಭಿನಯದ 'ಲೈಫ್ ಆಫ್ ಪೈ' ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ನಲ್ಲಿ ನಡೆಯುತ್ತಿರುವ 85ನೇ ವರ್ಣರಂಜಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೈಫ್ ಆಫ್ ಫೈ ಚಿತ್ರ ನಾಲ್ಕು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.'
ಲೈಫ್ ಆಫ್ ಪೈ' ಅತ್ಯುತ್ತಮ ಛಾಯಾಗ್ರಹಣ, ನಿರ್ದೇಶನ, ವಿಶ್ಯುವಲ್ ಎಫೆಕ್ಟ್ ಹಾಗೂ ಒರಿಜಿನಲ್ ಸ್ಕೋರ್ಗಾಗಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ನಾಲ್ಕು ಕೋಟಿ ರುಪಾಯಿ ಗಳಿಸಿತ್ತು. ಮತ್ತೊಂದು ವಿಶೇಷವೆಂದರೆ 'ಲೈಫ್ ಆಫ್ ಪೈ ಚಿತ್ರದಲ್ಲಿ ಬೆಂಗಳೂರಿನ ಹುಡುಗ ಗೌತಮ್ ಬೇಳೂರು ಅವರು ಅಭಿನಯಿಸಿದ್ದಾರೆ.'
ಲಿಂಕೊನ್' ಚಿತ್ರದ ಅಭಿನಯಕ್ಕಾಗಿ ಡೇನಿಯಲ್ ಡೇ ಲೆವಿಸ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಸಿಲ್ವರ್ ಲೈನಿಂಗ್ ಪ್ರೇ ಬುಕ್ ಚಿತ್ರದ ಅಭಿನಯಕ್ಕಾಗಿ ಜೆನ್ನಿಫರ್ ಲಾರೆನ್ಸ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡೇನಿಯಲ್ ಅವರಿಗೆ ಇದು ಮೂರನೇ ಆಸ್ಕರ್ ಪ್ರಶಸ್ತಿಯಾಗಿದೆ. ಇನ್ನು ಜ್ಯಾಂಗೋ ಅನ್ಚೈನ್ಡ್ ಚಿತ್ರದ ಅಭಿನಯಕ್ಕಾಗಿ ಕ್ರಿಸ್ಟೋಫರ್ ವಾಲ್ಟ್ ಅವರು ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.'
ಲೆಸ್ ಮಿಸರೆಬಲ್' ಹಾಗೂ 'ಆರ್ಗ್ರೋ' ತಲಾ ಮೂರು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿವೆ. 'ಸ್ಕೈಪಾಲ್' ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, 'ಬ್ರೇವ್' ಅತ್ಯುತ್ತಮ ಅನಿಮೇಟೆಡ್ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.