ಎಂಜಲಿನ ಜೋಲಿ ಆತ್ಮ ಕಥೆ ಓದಲು ಸಿದ್ದರಾಗಿ
, ಮಂಗಳವಾರ, 22 ಅಕ್ಟೋಬರ್ 2013 (15:10 IST)
ಎ೦ಜಲಿನಾ ಜೋಲಿ ಇದ್ದ ಕಡೆ ಸುದ್ದಿ ಸುದ್ದಿ.. ಈ ರೂಪರಾಶಿ ಸೆಕ್ಸಿ ಕ್ವೀನ್ ಕೇವಲ ತನ್ನ ಹಸಿಬಿಸಿ ತಾಣದಿಂದ ಮಾತ್ರವಲ್ಲ ಸಾಮಾಜಿಕ ಕಾರ್ಯಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ . ತನಗೆ ಆದ ಸ್ತನ ಕ್ಯಾನ್ಸರ್,ಅದನ್ನು ಎದುರಿಸಿದ ಬಗ್ಗೆ, ನೇರವಾಗಿ ಪ್ರಪಂಚಕ್ಕೆ ಆ ಸಂಗತಿ ಹೇಳಿದ ರೀತಿ ಎಲ್ಲವೂ ಮಾದರಿ. ಈಕೆಯ ಈ ಅಂಶವು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅನೇಕ ಹೆಣ್ಣುಮಕ್ಕಳಿಗೆ ಧೈರ್ಯ ನೀಡುವಂತಾಯಿತು . ಇದರಿಂದ ಆಕೆ ವಿಶ್ವದಲ್ಲಿ ಮತ್ತಷ್ಟು ಹೊಳೆದರು! ಈ ಸೌಂದರ್ಯವತಿ ಮತ್ತು ಅಪರೂಪವಾದ ನಟಿ ಈಗ ಮತ್ತೊಮ್ಮೆ ವಿಶ್ವದ ಗಮನ ತನ್ನತ್ತ ಸೆಳೆಯುವಂತೆ ಮಾಡುತ್ತಿದ್ದಾರೆ . ಆಕೆ ತನ್ನ ಆತ್ಮಕಥೆಯನ್ನು ಜಗತ್ತಿನ ಮುಂದಿಡಲು ಸಿದ್ಧ ಆಗಿದ್ದಾರೆ. ಅದಕ್ಕಾಗಿ ಸೂಕ್ತಪಬ್ಲೀಶರ್ ಹುಡುಕುತ್ತಿದ್ದಾರೆ ಆಕೆ. ಆತ್ಮ ಕಥೆಯ ಪ್ರಕಟನೆ ಮೊತ್ತ ಸುಮಾರು 30 ಮಿಲಿಯನ್ ಗಳಷ್ಟಿರುತ್ತದೆ ಅಂದರೆ ನಮ್ಮ ರೂಪಾಯಿ ಲೆಕ್ಕದಲ್ಲಿ 298 ಕೋಟಿ ರೂಪಾಯಿಗಳು . ಇದರ ಅನ್ವಯ ಆಕೆಯ ಪುಸ್ತಕ ಪಬ್ಲಿಶ್ ಮಾಡಲು ಅಮೇರಿಕ ಮೂರು ಪ್ರತಿಷ್ಟಿತ ಪಬ್ಲಿಷಿಂಗ್ ಕಂಪನಿಗಳು ಪೈಪೋಟಿ ನಡೆಸುತ್ತಿವೆಯಂತೆ . ವಿಶ್ವವಿಡಿ ಆಕೆಗೆ ಇರುವ ಫ್ಯಾನ್ ಗಳು, ಆಕೆಯ ಪಾಪ್ಯೂಲಾರಿಟಿ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡರೆ ಈ ಪುಸ್ತಕ ಪಬ್ಲಿಶ್ ಮಾಡುವ ಸಂಸ್ಥೆ ಚಿನ್ನದ ಗಣಿ ದೊರಕಿದಂತೆ ಎಂದು ಅಲ್ಲಿನ ಪತ್ರಿಕೆ ತಿಳಿಸಿದೆ . ಈ ಆತ್ಮಕಥೆ ವಿಶ್ವದಲ್ಲೇ ಬೆಸ್ಟ್ ಸೆಲ್ಲರ್ ಆಗುತ್ತದೆ ಎಂಬುದು ಎಳ್ಳಷ್ಟು ಸಂಶಯವಿಲ್ಲ ಎಂದೂ ಸಹ ಪತ್ರಿಕೆ ವರದಿ ಮಾಡಿದೆ . ಈಕೆ ತನ್ನ ಕಥೆಯನ್ನು ವಿಶ್ವಕ್ಕೆ ತಿಳಿಸ ಬೇಕು ಎಂದು ನಿರ್ಧರಿಸಿರುವುದು ಸತ್ಯ. ಆಕೆಯು ತನ್ನ ಆತ್ಮಕಥನ ತಿಳಿಸಲು ಇದೆ ಸೂಕ್ತ ಸಮಯ ಎಂದು ತಿಳಿಸಿದ್ದಾರೆ ಆಕೆಯ ಆಪ್ತವಲಯ ದವರು . ಸದ್ಯದಲ್ಲೇ ಪುಸ್ತಕ ರೆದಿಯಾಗುತ್ತೆ. ಓದಲು ಸಿದ್ಧರಾಗಿ.