ಎಂಜಲಿನಾಳಿಗಾಗಿ ನಿಯಮ ಸಡಲಿಸಿದ ಶೋ ರೂಂ..ಅದೆಲ್ಲಿ ಅಂದ್ರೆ?
, ಸೋಮವಾರ, 6 ಜನವರಿ 2014 (11:29 IST)
ಅಂತಾರಾಷ್ಟ್ರೀಯ ಸಿನಿಮಾರಂಗದಲ್ಲಿ ಎಂಜಲಿನಾ ಜೋಲಿ ಸಿಕ್ಕಾಪಟ್ಟೆ ಹೆಸರುವಾಸಿಯದ ನಟಿ. ಆಕೆ ಕೇವಲ ತನ್ನ ನಟನೆಯಿಂದ ಮಾತ್ರವಲ್ಲ ಜೊತೆಗೆ ತಾನು ಮಾಡಿರುವ ಸಮಾಜ ಸೇವೆ , ಆದರ್ಶಗಳಿಂದ ಹೆಚ್ಚು ಜನಪ್ರಿಯತೆ ಪಡೆದ ನಟಿ. ಆಕೆಗೆ ವಿಶ್ವವ್ಯಾಪಿಯಾಗಿ ಅಭಿಮಾನಿಗಳ ದಂಡೆ ಇದೆ. ಎಂಜಲಿನಾಳನ್ನು ಅದೆಷ್ಟರ ಮಟ್ಟಿಗೆ ಇಷ್ಟ ಪಡುತ್ತಾರೆ ಎಂಬುದಕ್ಕೆ ಈಗ ಒಂದು ಉದಾಹರಣೆ ತಿಳಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ ಒಂದು ಶೋರೂಂ ಇದೆ. ಅದು ಮುಂಜಾನೆ ಸರಿಯಾದ ಸಮಯಕ್ಕೆ ತೆರೆದರೆ, ಮತ್ತೇ ರಾತ್ರಿ ನಿಗದಿ ಪಡಿಸಿದ ಸಮಯಕ್ಕೆ ಮುಚ್ಚುತ್ತದೆ. ಆ ಅಂಗಡಿ ಮುಚ್ಚುವ ಸಮಯ ಹತ್ತಿರ ಬಂದಂತೆ ಅಲ್ಲಿರುವ ಕಸ್ಟಮರ್ ಗಳು ಮನೆಗೆ ಹೊರಡಲು ಆರಂಭಿಸುತ್ತಾರೆ. ಅಷ್ಟೊಂದು ಕಠಿಣ ಅಲ್ಲಿನ ಕ್ರಮಗಳು. ಆದರೆ ಹಾಲಿವುಡ್ ನ ಈ ಚೆಲುವೆಗೆಂದು ತಮ್ಮ ನಿಯಮಗಳಲ್ಲಿ ಸಡಲಿಕೆ ಮಾಡಿಕೊಂಡಿದ್ದಾರೆ ಈ ಅಂಗಡಿಯವರು! ತನ್ನ ಗಂಡ, ಆರು ಜನ ಮಕ್ಕಳ ಜೊತೆ ಆಕೆ ಅಲ್ಲಿ ಶಾಪಿಂಗ್ ಮಾಡಬೇಕು ಎಂದು ನಿರ್ಧರಿಸಿದರು . ಆದರೆ ಜನರು ಇರುವಾಗ ಶಾಪಿಂಗ್ ಮಾಡಲು ತುಂಬಾ ಕಷ್ಟಕರ ಎಂದು ಅವರು ಜನರಿಲ್ಲದ ವೇಳೆಯಲ್ಲಿ ಶಾಪಿಂಗ್ ಮಾಡಲು ನಿರ್ಧರಿಸಿದರು. ಆದ್ದರಿಂದ ರಾತ್ರಿ ಆ ಅಂಗಡಿ ತೆರೆಯುವಂತೆ ಅದರ ಯಜಮಾನನ ಬಳಿ ಮನವಿ ಮಾಡಿದರಂತೆ. ಇಂತಹ ನಟಿ ಕೇಳಿದಾಗ ಇಲ್ಲ ಎನ್ನುವುದಕ್ಕೆ ಆತನೇನು ಮೂರ್ಖನೆ? ಸರಿ ಆಕೆಯ ಆಸೆಯಂತೆ ಎಲ್ಲರೂ ಹೊರಟ ಬಳಿಕ ಎಂಜಲಿನಾ ಜೋಲಿಗೆ ಶಾಪಿಂಗ್ ಮಾಡುವ ಅವಕಾಶ ನೀಡಿದರಂತೆ ಆತ. ಅರ್ಧಗಂಟೆಯಲ್ಲಿ ಆಕೆ ತನ್ನ ಶಾಪಿಂಗ್ ಪೂರೈಸಿದರಂತೆ. ಎಂಜಲಿನಾ ಶಾಪಿಂಗ್ ಮಾಡುವುದನ್ನು ನೋಡುವುದಕ್ಕೂ ಎರಡು ಕಣ್ಣು ಸಾಲದು ಎಂದು ಆ ಅಂಗಡಿಯ ಸೆಲ್ಸ್ ಮ್ಯಾನ್ ತನಗೆ ತಿಳಿದವರಿಗೆಲ್ಲಾ ಹೇಳಿದನಂತೆ. ಹೀಗೆ ಎಂಜಲಿನಾ ರಹಸ್ಯ ಶಾಪಿಂಗ್ ಬಯಲಾಯಿತು! ತಮಗೆ ಆಕೆಯನ್ನು ನೋಡುವ ಭಾಗ್ಯ ತಪ್ಪಿತಲ್ಲ ಎಂದು ಆಕೆಯ ಅಭಿಮಾನಿಗಳು ಬೇಸರ ಹೊಂದಿದರಂತೆ!