Select Your Language

Notifications

webdunia
webdunia
webdunia
webdunia

ಅಂದು ಪಾಪ್ ತಾರೆ ಮಡೋನಾ ಮೇಲೆ ಅತ್ಯಾಚಾರ ನಡೆದಿತ್ತಂತೆ...!

ಪಾಪ್ ತಾರೆ ಮಡೋನಾ
, ಸೋಮವಾರ, 7 ಅಕ್ಟೋಬರ್ 2013 (10:43 IST)
PR
ಒಂದು ಕಾಲದಲ್ಲಿ ಪಾಪ್ ಲೋಕದ ತಾರೆ ಮಡೋನಾ ನ್ಯೂಯಾರ್ಕ ನಗರಕ್ಕೆ ಬಂದಿದ್ದಾಗ ಅವರ ಮೇಲೆ ಅತ್ಯಾಚಾರ ನಡೆದಿತ್ತಂತೆ. ಅದೂ ಕೂಡಾ ಚಾಕು ತೋರಿಸಿ ಅವರನ್ನು ಬೆದರಿಸಿ ಈ ಕಾರ್ಯ ಮಾಡಲಾಗಿತ್ತಂತೆ.

ಆಗಿನ್ನೂ ಪಾಪ್ ತಾರೆಯಾಗಿ ಮಿಂಚಬೇಕಿದ್ದ ಕಾಲ. ಉತ್ತಮ ಜೀವನವನ್ನು ಅರಸಿಕೊಂಡು ಮೊದಲ ಬಾರಿಗೆ ನ್ಯೂಯಾರ್ಕ ನಗರಕ್ಕೆ ಬಂದಿದ್ದರಂತೆ. ಅಲ್ಲಿ ಅವರನ್ನು ಸ್ವಾಗತಿಸುವವರು ಯಾರೂ ಇರಲಿಲ್ಲವೆನ್ನಿ.

webdunia
PR
ಇದನ್ನೆಲ್ಲಾ ಈಗ ಹೇಳಿಕೊಂಡಿದ್ದು ಅದೇ ಪಾಪ್ ತಾರೆ ಮಡೋನಾ. ಹಾರ್ಪರ್ಸ್ ಬಜಾರ್ ಮ್ಯಾಗಜಿನ್ಗೆ ಅವರು ನೀಡಿರುವ ಸಂದರ್ಶನದಲ್ಲಿ 55 ವರ್ಷದ ಮಡೋನಾ ತನ್ನ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಈ ಮಾತು ಹೇಳಿದ್ದಾರೆ. ನ್ಯೂಯಾರ್ಕ ನಗರಕ್ಕೆ ಬಂದು ನೆಲೆಸಿದ್ದ ಮೊದಲ ವರ್ಷದಲ್ಲೇ ನನ್ನ ಬೆನ್ನಿಗೆ ಚಾಕು ಹಾಕುವ ಪಾತಕಿಗಳು ಸುತ್ತ ಮುತ್ತ ಇದ್ದರು.

ನನ್ನನ್ನು ಮಹಡಿಯೊಂದಕ್ಕೆ ಎಳೆದುಕೊಂಡು ಹೋಗಿ ಗನ್ ತೋರಿಸಿ ನನ್ನ ಮೇಲೆ ಅತ್ಯಾಚಾರ ನಡೆಸಿದರು. ನಾನು ನನ್ನ ಹದಿಹರಯದ ವಯಸ್ಸಿನಲ್ಲೇ ಅಪರಿಚಿತರ ಮಧ್ಯೆ ಹೀಗೆ ಕಾಲ ಕಳೆಯಬೇಕಾಯಿತು ಎಂದು ದುಃಖ ತೋಡಿಕೊಂಡಿದ್ದಾರೆ. ಅಂತಹಾ ಪ್ರಸಿದ್ಧಿಯ ಹಿಂದೆಯೂ ಇಂತದ್ದೊಂದು ನೋವಿರುತ್ತದೆ ಎಂಬುದು ಕಟು ಸತ್ಯವೇ ಹೌದು.

Share this Story:

Follow Webdunia kannada