Select Your Language

Notifications

webdunia
webdunia
webdunia
webdunia

ಈ ಸಮಸ್ಯೆ ಇರುವ ತಾಯಂದಿರು ಸ್ತನ್ಯಪಾನದ ವೇಳೆ ಬೆಳ್ಳುಳ್ಳಿ ಸೇವಿಸಬಾರದು

ಈ ಸಮಸ್ಯೆ ಇರುವ ತಾಯಂದಿರು ಸ್ತನ್ಯಪಾನದ ವೇಳೆ ಬೆಳ್ಳುಳ್ಳಿ ಸೇವಿಸಬಾರದು
ಬೆಂಗಳೂರು , ಶನಿವಾರ, 2 ನವೆಂಬರ್ 2019 (06:48 IST)
ಬೆಂಗಳೂರು : ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಎಲ್ಲರಿಗೂ ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಬೆಳ್ಳುಳ್ಳಿ ಹೆಚ್ಚು ಸೇವಿಸಬಾರದು. ಹಾಗೇ ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಇದು ಉತ್ತಮವಾಗಿದ್ದರೂ ಕೂಡ ಈ ಸಮಸ್ಯೆ ಇರುವ ತಾಯಂದಿರು ಅದನ್ನು ಸೇವಿಸಬಾರದು.




ಸ್ತನ್ಯಪಾನ ಮಾಡಿಸುವ ತಾಯಂದಿರು ಬೆಳ್ಳುಳ್ಳಿ ಸೇವಿಸಿದರೆ ತುಂಬಾ ಒಳ್ಳೆಯದು. ಇದು ಎದೆ ಹಾಲನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಇದು ಗೆಲ್ಯಾಕ್ಟಗಜ್ ಆಗಿ ಪಾತ್ರ ನಿರ್ವಹಿಸಿ, ಎದೆ ಹಾಲನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೇ ಇದು ಹೆರಿಗೆ ನಂತರ ತಾಯಂದಿರಲ್ಲಿ ಕಂಡುಬರುವ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ. ಮಗುವಿಗೆ ಹಾಗೂ ತಾಯಿಯಲ್ಲಿ ಉಂಟಾಗುವ ಶಿಲೀಂಧ್ರ ಸೋಂಕನ್ನು ನಿವಾರಿಸುತ್ತದೆ.


ಆದರೆ ಬೆಳ್ಳುಳ್ಳಿ ವಾಸನೆ ಇಷ್ಟವಿರದವರೂ, ಹಾಗೂ ಬೆಳ್ಳುಳ್ಳಿ ಸ್ವಾದವಿರುವ ಹಾಲು ಕುಡಿದು ಮಗು ಕಿರಿಕಿರಿ ಮಾಡಿದರೆ ಅದನ್ನು ಸೇವಿಸದಿರುವುದೇ ಉತ್ತಮ. ತಾಯಿಗೆ ಮಧುಮೇಹವಿದ್ದರೆ  ಹಾಗೂ ಪ್ರತಿರೋಧಕ ಔಷಧ ಸೇವಿಸುತ್ತಿದ್ದರೆ ಬೆಳ್ಳುಳ್ಳಿ ಸೇವಿಸಬಾರದು. 


Share this Story:

Follow Webdunia kannada

ಮುಂದಿನ ಸುದ್ದಿ

ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವವರಿಗೆ ಈ ವಿಚಾರ ತಿಳಿದಿರಲಿ