Webdunia - Bharat's app for daily news and videos

Install App

ಊಟವಾದ ತಕ್ಷಣ ಸಿಹಿ ತಿನ್ನುವ ಬಯಕೆಯಾಗುವುದು ಯಾಕೆ ಗೊತ್ತಾ?!

Webdunia
ಸೋಮವಾರ, 19 ಜೂನ್ 2017 (11:29 IST)
ಬೆಂಗಳೂರು: ತುಂಬಾ ಹಸಿವಾದಾಗ ಏನೆಲ್ಲಾ ಸಿಗುತ್ತೋ ಎಲ್ಲವನ್ನೂ ತಿಂದು ಬಿಡಬೇಕೆನಿಸುತ್ತದೆ. ಹಾಗೇ ಏನೇ ಊಟ ಮಾಡಿದರೂ, ಊಟ ಮಾಡಿದ ತಕ್ಷಣ ನಮಗೆ ಸ್ವಲ್ಪ ಸಿಹಿ ತಿಂದರೆ ಚೆನ್ನ ಎನಿಸುತ್ತದೆ.

 
ಯಾಕೆ ನಮಗೆ ಊಟವಾದ ತಕ್ಷಣ ಸಿಹಿ ತಿನ್ನುವ ಮನಸ್ಸಾಗುತ್ತದೆ? ನಮ್ಮ ನಾಲಿಗೆ ಯಾಕೆ ಸಕ್ಕರೆ ಬಯಸುತ್ತದೆ? ಅದಕ್ಕೆ ಒಂದು ಕಾರಣವಿದೆ.

ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಅದು ಜೀರ್ಣವಾಗಬೇಕಾದರೆ ನಮ್ಮ ದೇಹದಲ್ಲಿರುವ ಶಕ್ತಿ ಹೆಚ್ಚಿನ ಪಾಲು ಖರ್ಚಾಗುತ್ತದೆ. ದೇಹಕ್ಕೆ ಮತ್ತೆ ಶಕ್ತಿ ಬೇಕಾದರೆ, ಗ್ಲುಕೋಸ್ ಅಥವಾ ಸಕ್ಕರೆ ಅಂಶವಿರುವ ಆಹಾರದ ಅಗತ್ಯವಿರುತ್ತದೆ.

ಹೀಗಾಗಿಯೇ ಈ ಸಂದರ್ಭದಲ್ಲಿ ಸಿಹಿ ಆಹಾರ ವಸ್ತು ಸೇವಿಸುವ ಬಯಕೆಯಾಗುತ್ತದೆ. ಅದಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚು ಕಡಿಮೆಯಿದ್ದರೂ, ಈ ಸಮಸ್ಯೆ ಎದುರಾಗಬಹುದು. ಇದು ದೇಹದಲ್ಲಿ ರಕ್ತದ ಅಂಶ ಸಮತೋಲದಲ್ಲಿಡುವ ಕ್ರಿಯೆ ಅಷ್ಟೇ. ಒಂದು ವೇಳೆ ಸಕ್ಕರೆ ಅಂಶ ನಿಯಂತ್ರಣದಲ್ಲಿಡಬೇಕಾದ ಆರೋಗ್ಯ ಸ್ಥಿತಿ ನಿಮ್ಮದಾಗಿದ್ದರೆ, ನಾಲಿಗೆ ಚಪಲಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.

 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments