Publish Date: Tue, 18 Aug 2026 (12:41 IST)
Updated Date: Tue, 18 Aug 2026 (12:43 IST)
ಊಟವಾದ ತಕ್ಷಣವೇ ಮತ್ತೆ ಏನಾದರೂ ತಿನ್ನಬೇಕು ಅಥವಾ ಮುಖ್ಯವಾಗಿ ಸಿಹಿ ತಿನ್ನಬೇಕು ಎನಿಸುವುದು ಬಹಳಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಅನುಭವ. ಇದಕ್ಕೆ ವೈದ್ಯಕೀಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಹಲವು ಕಾರಣಗಳಿವೆ.
ಊಟವಾದ ತಕ್ಷಣ ತಿನ್ನಬೇಕು ಎನಿಸಲು ಮುಖ್ಯ ಕಾರಣಗಳು
ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತ : ಊಟದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ (ಬಿಳಿ ಅನ್ನ, ಮೈದಾ ಇತ್ಯಾದಿ) ಹೆಚ್ಚಿದ್ದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ತಕ್ಷಣ ಏರಿ, ನಂತರ ತಟ್ಟನೆ ಕುಸಿಯುತ್ತದೆ. ಈ ವೇಳೆ ಮೆದುಳು ತಕ್ಷಣದ ಶಕ್ತಿಗಾಗಿ ಮತ್ತೆ ಆಹಾರವನ್ನು (ವಿಶೇಷವಾಗಿ ಸಿಹಿ) ಕೇಳುತ್ತದೆ.
ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಕೊರತೆ: ಊಟದಲ್ಲಿ ಸಾಕಷ್ಟು ಪ್ರೋಟೀನ್ (ಬೇಳೆಕಾಳು, ಪನ್ನೀರ್, ಮೊಟ್ಟೆ) ಮತ್ತು ನಾರಿನಂಶ (ಸೊಪ್ಪು, ತರಕಾರಿ) ಇಲ್ಲದಿದ್ದರೆ, ಆಹಾರ ಬೇಗನೆ ಜೀರ್ಣವಾಗಿ ಹೊಟ್ಟೆ ತುಂಬಿದ ಅನುಭವ ದೀರ್ಘಕಾಲ ಉಳಿಯುವುದಿಲ್ಲ.
ರೂಢಿ ಅಥವಾ ಅಭ್ಯಾಸ : ಪ್ರತಿ ಬಾರಿ ಊಟವಾದ ಮೇಲೆಯೂ ಸಿಹಿ ಅಥವಾ ತಿನಿಸು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರೆ, ಮೆದುಳು ಊಟ ಮುಗಿದ ತಕ್ಷಣ ಆ ತಿನಿಸನ್ನು ನಿರೀಕ್ಷಿಸಲು ಪ್ರಾರಂಭಿಸುತ್ತದೆ.
ಪೋಷಕಾಂಶಗಳ ಕೊರತೆ: ದೇಹದಲ್ಲಿ ಮೆಗ್ನೀಸಿಯಮ್, ಕ್ರೋಮಿಯಂ- ವಿಟಮಿನ್‌ಗಳ ಕೊರತೆಯಿದ್ದಾಗಲೂ ಊಟದ ನಂತರ ಸಿಹಿ ತಿನ್ನುವ ಬಯಕೆ ಹೆಚ್ಚಾಗುತ್ತದೆ.
ಮಾನಸಿಕ ಒತ್ತಡ ಹಾಗೂ ನಿದ್ರೆಯ ಅಭಾವ: ಸರಿಯಾಗಿ ನಿದ್ರೆ ಮಾಡದಿರುವುದು ಅಥವಾ ಒತ್ತಡದಲ್ಲಿದ್ದಾಗ ದೇಹದಲ್ಲಿ 'ಕಾರ್ಟಿಸೋಲ್' ಹಾರ್ಮೋನ್ ಹೆಚ್ಚಾಗಿ, ಆಹಾರದ ಮೇಲಿನ ಹಸಿವು/ಬಯಕೆ ಹೆಚ್ಚುತ್ತದೆ.
ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ?
ಹೌದು, ಇದು ದೀರ್ಘಕಾಲದವರೆಗೆ ಮುಂದುವರಿದರೆ ಆರೋಗ್ಯಕ್ಕೆ ತೊಂದರೆಯಾಗಬಹುದು.
ತೂಕ ಹೆಚ್ಚಳ: ಹೊಟ್ಟೆ ತುಂಬಿದ್ದರೂ ಹೆಚ್ಚುವರಿಯಾಗಿ ತಿನಿಸು ಅಥವಾ ಸಿಹಿ ತಿಂದರೆ ದೇಹಕ್ಕೆ ಅನಗತ್ಯ ಕ್ಯಾಲೊರಿಗಳು ಸೇರಿ ತೂಕ ಹೆಚ್ಚಾಗುತ್ತದೆ.
ಜೀರ್ಣಕ್ರಿಯೆಯ ಸಮಸ್ಯೆ: ಊಟದ ತಕ್ಷಣ ಮತ್ತೆ ತಿಂದಾಗ ಜೀರ್ಣಾಂಗವ್ಯೂಹದ ಮೇಲೆ ಒತ್ತಡ ಬಿದ್ದು ಅಜೀರ್ಣ, ಗ್ಯಾಸ್ಟ್ರಿಕ್ ಅಥವಾ ಹೆವಿ ಎನಿಸುವ ಸಮಸ್ಯೆ ಕಾಡಬಹುದು.
ಸಕ್ಕರೆ ಕಾಯಿಲೆಯ ಅಪಾಯ: ನಿರಂತರವಾಗಿ ಊಟದ ನಂತರ ಸಿಹಿ ಅಥವಾ ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ತಿನ್ನುವುದರಿಂದ 'ಇನ್ಸುಲಿನ್ ರೆಸಿಸ್ಟೆನ್ಸ್' ಉಂಟಾಗಿ ಭವಿಷ್ಯದಲ್ಲಿ ಟೈಪ್-2 ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ