Select Your Language

Notifications

webdunia
webdunia
webdunia
webdunia

‘ಆ’ ದಿನಗಳಲ್ಲಿ ಯಾವ ಆಹಾರ ಸೇವಿಸಬೇಕು?

‘ಆ’ ದಿನಗಳಲ್ಲಿ ಯಾವ ಆಹಾರ ಸೇವಿಸಬೇಕು?
Bangalore , ಶುಕ್ರವಾರ, 16 ಡಿಸೆಂಬರ್ 2016 (14:13 IST)
ಬೆಂಗಳೂರು: ಋತುಸ್ರಾವದ ಆ ದಿನಗಳು ಮಹಿಳೆಯರಿಗೆ  ವಿಶೇಷ ದಿನಗಳು. ಸಾಮಾನ್ಯ ದಿನದಂತೆ ಇರಲು ಸಾಧ್ಯವಿಲ್ಲ. ಕೆಲವರಿಗೆ ಹೊಟ್ಟೆ ನೋವು, ಕಾಲು ನೋವು ಇನ್ನೇನೋ ಕಿರಿ ಕಿರಿಗಳು. ಹಾಗಾಗಿ ಅಂತಹ ದಿನಗಳಲ್ಲಿ ಯಾವ ರೀತಿಯ ಆಹಾರ ಸೇವಿಸುವುದು ಸೂಕ್ತ? ಇಲ್ಲಿದೆ ನೋಡಿ ಕೆಲವು ಟಿಪ್ಸ್ ಗಳು.

ನಾರಿನಂಶ ಇರುವ ತರಕಾರಿ

ಈ ಸಮಯದಲ್ಲಿ ನಾರಿನ ಅಂಶ ಹೆಚ್ಚು ಇರುವ ತರಕಾರಿಗಳನ್ನು ಆಹಾರ ವಸ್ತುಗಳನ್ನು ತಿನ್ನುವುದು ಒಳ್ಳೆಯದು. ಬೀನ್ಸ್, ಹೀರೇಕಾಯಿ, ಬೇಳೆ ಕಾಳುಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ.

ಹಸಿರು ತರಕಾರಿ
ಹಸಿರು ಬಣ್ಣ ಹೆಚ್ಚಿರುವ ತರಕಾರಿಗಳನ್ನು ಬಳಸುವುದು ಉತ್ತಮ. ಇದರಲ್ಲಿ ಖನಿಜಾಂಶ ಜಾಸ್ತಿಯಿರುವುದರಿಂದ ಈ ಸಮಯದಲ್ಲಿ ಬರುವ ಮೂಡ್ ಬದಲಾವಣೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ.

ಹಳದಿಯುಕ್ತ ತರಕಾರಿಗಳು

ಕ್ಯಾರೆಟ್, ಪಪ್ಪಾಯಿ, ಅನನಾಸು ತಿನ್ನುವುದರಿಂದ ಮಾಂಸ ಖಂಡಗಳಿಗೆ ಉತ್ತಮ. ಇದು ಅಧ್ಯಯನಗಳಿಂದಲೂ ದೃಡಪಟ್ಟಿದೆ.

ಈ ಎಲ್ಲಾ ಆರೋಗ್ಯಕರ ಆಹಾರ ವಸ್ತುಗಳ ಹೊರತಾಗಿ, ಜಂಕ್ ಫುಡ್, ಫಾಸ್ಟ್ ಫುಡ್, ಕಾಫಿ ಸೇವನೆ ಕಡಿಮೆ ಮಾಡುವುದು ಈ ಸಮಯದಲ್ಲಿ ಆರೋಗ್ಯಕ್ಕೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುರುಳಿಕಾಳಿನ ದೋಸೆ ಮಾಡುವ ವಿಧಾನ