Select Your Language

Notifications

webdunia
webdunia
webdunia
webdunia

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

Blood
ರಕ್ತ ಪರೀಕ್ಷೆ ಮಾಡಿದಾಗ ಇಎಸ್ ಆರ್ ಕೌಂಟ್ ಹೆಚ್ಚಾಗಿದೆ ಎಂದರೆ ಏನು ಸಮಸ್ಯೆ ಎದುರಿಸಬೇಕಾಗುತ್ತದೆ ಮತ್ತು ಇದಕ್ಕೆ ಪರಿಹಾರವೇನು ಇಲ್ಲಿದೆ ನೋಡಿ  ವಿವರ.

 
ಇಎಸ್ಆರ್ ಎಂದರೇನು?

ರಕ್ತ ಪರೀಕ್ಷೆಯಲ್ಲಿ ಇಎಸ್ಆರ್ ಎಂದರೆ ಕೆಂಪು ರಕ್ತಕಣಗಳು ಒಂದು ನಿರ್ದಿಷ್ಟ ಸಮಯದಲ್ಲಿ ಎಷ್ಟು  ವೇಗವಾಗಿ ಕೆಳಕ್ಕೆ ಬಿದ್ದು ಸ್ಥಿರವಾಗುತ್ತದೆ ಎಂಬುದನ್ನು ಅಳೆಯವುದಾಗಿದೆ. ರಕ್ತದ ಮಾದರಿಯನ್ನು ಒಂದು ತಂತಿಯಂತಹ ಸಾಧನದಲ್ಲಿ ಇಟ್ಟು ಪರೀಕ್ಷಿಸಿದಾಗ ಅದು ಎಷ್ಟು ಎಂಎಂ ಎತ್ತರಕ್ಕೆ ಬಿದ್ದಿದೆ ಎಂಬುದನ್ನು ನೋಡಲಾಗುತ್ತದೆ. ಈ ಮೌಲ್ಯ ಹೆಚ್ಚಾದರೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 
ಯಾರಿಗೆ ಮತ್ತು ಏನೆಲ್ಲಾ ಸಮಸ್ಯೆಯಾಗುತ್ತದೆ?

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದಾಗ ಮೈ ಕೈ ನೋವು, ಊತ ಕಾಣಿಸಿಕೊಳ್ಳುವುದು, ನ್ಯುಮೋನಿಯಾದಂತಹ ಸೋಂಕು ರೋಗ ಹೆಚ್ಚಾಗಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ರೊಮೆಟಾಯ್ಡ್ ಆರ್ಥರೈಟಿಸ್, ಹೃದಯಾಘಾತದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಯಾವುದಾದರೂ ಮೇಜರ್ ಸರ್ಜರಿಯಾದಾಗ ಸಂಭವಿಸುತ್ತದೆ.

ಪರಿಹಾರವೇನು?
ಇದಕ್ಕೆ ನಿಮ್ಮ ವೈದ್ಯರ ಸಲಹೆ ಪಡೆದು ಔಷಧಿಗಳನ್ನು ಸೇವಿಸುವುದರ ಜೊತೆಗೆ ಆಹಾರ ಶೈಲಿಯಲ್ಲೂ ಬದಲಾವಣೆ ತಂದು ಪರಿಹಾರ ಕಂಡುಕೊಳ್ಳಬಹುದು. ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಸೇವನೆ ಮಾಡಬೇಕು. ಆಹಾರದಲ್ಲಿ ಅರಿಶಿನ, ಶುಂಠಿ, ವಾಲ್ ನಟ್, ಬೆಳ್ಳುಳ್ಳಿ, ಒಮೆಗಾ 3- ಅಂಶವನ್ನು ತೆಗೆದುಕೊಳ್ಳಿ. ಜೊತೆಗೆ ಯೋಗ, ದೈಹಿಕ ಕಸರತ್ತಿಗೆ ಹೆಚ್ಚು ಒತ್ತು ನೀಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ