ಬೆಂಗಳೂರು: ಮೆದುಳು ಎನ್ನುವುದು ಮಾನವ ಶರೀರವನ್ನು ನಿಯಂತ್ರಿಸುವ ಅಂಗ. ಅದರ ಸಂರಕ್ಷಣೆ ಅಷ್ಟೇ ಮುಖ್ಯ. ಮೆದುಳಿಗೆ ಹಾನಿ ಮಾಡಬಲ್ಲ ಕೆಲವು ಆಹಾರಗಳಿವೆ. ಅವು ಯಾವುವು ನೋಡೋಣ.
ಸಿಹಿ ಪದಾರ್ಥಗಳು
ಸಿಹಿ ಪದಾರ್ಥಗಳು ಎಂದರೆ ಎಲ್ಲರಿಗೂ ಇಷ್ಟ. ಹಾಗಂತ ಸಿಕ್ಕಾಪಟ್ಟೆ ಸಿಹಿ ಪದಾರ್ಥಗಳನ್ನು ಸೇವಿಸುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇದು ನಮ್ಮ ಶರೀರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕುಂಠಿತಗೊಳಿಸುತ್ತದೆ.
ವಾಯು ಮಾಲಿನ್ಯ
ಆಹಾರ ಮಾತ್ರವಲ್ಲ, ವಾತಾವರಣದಲ್ಲಿರುವ ದೂಳು ಕೂಡಾ ನಮ್ಮ ಮೆದುಳಿಗೆ ಹಾನಿಯುಂಟು ಮಾಡಬಲ್ಲದು. ಆಮ್ಲಜನಕ ಸರಿಯಾಗಿ ಪೂರೈಕೆಯಾಗದಿದ್ದರೆ, ಮೆದುಳಿನ ಸುರಕ್ಷತೆಗೆ ತಡೆಯಾಗಬಹುದು.
ಹೆಚ್ಚು ತಿನ್ನುವುದು
ನಿಗದಿತ ಲೆಕ್ಕಕ್ಕಿಂತ ಹೆಚ್ಚು ತಿನ್ನುವುದರಿಂದ ದೇಹದ ಸಮತೋಲನ ತಪ್ಪುವುದು. ಸುರಕ್ಷಿತವಲ್ಲದ, ಆರೋಗ್ಯಕರವಲ್ಲದ ಆಹಾರ ಸೇವನೆಯಿಂದ ಮೆದುಳಿನ ಆರೋಗ್ಯಕ್ಕೆ ತೊಂದರೆಯಾಗಬಹುದು.
ಚೆನ್ನಾಗಿ ಮಾತನಾಡಿ
ನಮ್ಮ ಮೆದುಳು ಮಾಂಸಖಂಡದಂತೆ. ಅದಕ್ಕೆ ಚಟುವಟಿಕೆ ನೀಡಿದಷ್ಟು ಅದು ಆರೋಗ್ಯವಾಗಿರುತ್ತದೆ. ಹಾಗಾಗಿ ಹೆಚ್ಚು ಮಾತನಾಡಿದಷ್ಟು ಮೆದುಳಿಗೆ ಕೆಲಸ ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ