Select Your Language

Notifications

webdunia
webdunia
webdunia
webdunia

ಕಣ್ಣಿನ ಆರೋಗ್ಯಕ್ಕೆ ತಿನ್ನಬೇಕಾದ ತರಕಾರಿಗಳು

ಕಣ್ಣಿನ ಆರೋಗ್ಯಕ್ಕೆ ತಿನ್ನಬೇಕಾದ ತರಕಾರಿಗಳು
Bangalore , ಶುಕ್ರವಾರ, 24 ಫೆಬ್ರವರಿ 2017 (08:37 IST)
ಬೆಂಗಳೂರು: ಕಣ್ಣು ಮನುಷ್ಯನ ಅವಿಭಾಜ್ಯದ ಅಂಗ. ಆದರೆ ಆಧುನಿಕ ಯುಗದಲ್ಲಿ ಕಂಪ್ಯೂಟರ್, ಮೊಬೈಲ್ ಬಳಕೆ ಹೆಚ್ಚು ಮಾಡುವುದರಿಂದ ಬೇಗನೇ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ನಾವು ತಿನ್ನಬೇಕಾದ ತರಕಾರಿಗಳು ಯಾವುವು ನೋಡೋಣ.

 
ಕ್ಯಾರೆಟ್
ಕೆರೋಟಿನ್ ಅಂಶವಿರುವ ತರಕಾರಿ ಇದು. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಜೋಳ

ಜೋಳ ತಿನ್ನುವ ಅಭ್ಯಾಸವಿದ್ದರೆ ಹಾಗೇ ಮುಂದುವರಿಸಿ. ಸೂಪ್, ಅಥವಾ ಹಾಗೇ ಹಸಿ ಜೋಳ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದು.

ಬಸಳೆ ಸೊಪ್ಪು

ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೂಟಿನ್ ಅಂಶವಿರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.  ಸಲಾಡ್, ಪಲ್ಯ ಯಾವುದಾದರೂ ರೂಪದಲ್ಲಿ ಇದನ್ನು ಸೇವಿಸಿ.

ಮೊಟ್ಟೆ

ಮೊಟ್ಟೆ ಹಲವು ರೋಗಗಳು ಬಾರದಂತೆ ತಡೆಗಟ್ಟುವ ಗುಣ ಹೊಂದಿದೆ. ವಿಟಮಿನ್ ಇ, ಒಮೆಗಾ3, ಸೇರಿದಂತೆ ಹಲವು ಪೋಷಕಾಂಶಗಳ ಅಗರ ಇದು.

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚು. ಕಣ್ಣಿನ ಅಂಗಾಂಶಗಳ ಬೆಳವಣಿಗೆಗೆ ಇದು ಸಹಕಾರಿ. ಅಲ್ಲದೆ ವಯಸ್ಸಾದಂತೆ ಕಾಡುವ ದೃಷ್ಟಿ ದೋಷಗಳಿಗೂ ಇದು ಸುಲಭ ಪರಿಹಾರ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂಗಳಲ್ಲಿ ನಕಲಿ ನೋಟು ಬಂದರೆ ಗಾಬರಿ ಬೇಡ.. ಈ ಟಿಪ್ಸ್ ಫಾಲೋ ಮಾಡಿ