Webdunia - Bharat's app for daily news and videos

Install App

ನಿದ್ದೆಗೆ ರಾಮಬಾಣ ಏನ್ ಗೋತ್ತ? ಒಮ್ಮೆ ಟೈ ಮಾಡಿ

Webdunia
ಶನಿವಾರ, 29 ಜನವರಿ 2022 (09:28 IST)
ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್  ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ.

ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಉಸಿರಾಟ

ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಮುಲ್ಲೀನ್, ಬ್ಯಾಕ್ಟೀರಿಯಾ  ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮುಲ್ಲೀನ್ ಟೀಯ ಸೇವನೆ ಶೀತ, ಕೆಮ್ಮು ಮತ್ತು ಬ್ರಾಂಕೈಟಿಸ್ನಂತಹ ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ.

ಒತ್ತಡ

ದಿನಕ್ಕೆ ಎರಡು ಕಪ್ಗಳಷ್ಟು ಮುಲ್ಲೀನ್ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಈ ಚಹಾ ಸೇವನೆ ನಿದ್ದೆ ಯ ಸಮಸ್ಯೆಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ.

ಜೀರ್ಣಕ್ರಿಯೆ

ತಜ್ಞರ ಪ್ರಕಾರ, ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ.

ಚರ್ಮ

ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments