Webdunia - Bharat's app for daily news and videos

Install App

ಗರ್ಭಿಣಿ ಮಹಿಳೆ ತನ್ನ ಗಂಡನಿಂದ ಬಯಸೋದು ಏನನ್ನು?

Webdunia
ಗುರುವಾರ, 29 ಜೂನ್ 2017 (08:51 IST)
ಬೆಂಗಳೂರು: ಒಡಲಲ್ಲಿ ತಮ್ಮಿಬ್ಬರ ಪ್ರೀತಿಯ ಫಲ ಹೊತ್ತುಕೊಂಡ ಮಹಿಳೆಯನ್ನು ಹೇಗೆ ನೋಡಿಕೊಳ್ಳಬೇಕು? ಹೀಗೊಂದು ಪ್ರಶ್ನೆ ಗಂಡಂದಿರಿಗೆ ಕಾಡದೇ ಇರುವುದಿಲ್ಲ.

 
ಹಾಗಂತ ಹೊತ್ತು ಹೆರುವವಳು ಅವಳು ಎಂದು ನಿಮ್ಮದೇನೂ ಕೆಲಸವಿಲ್ಲ ಎಂದುಕೊಳ್ಳಬೇಡಿ. ಅದೆಲ್ಲಾ ಅವಳ ಕೆಲಸ. ನಾನು ಗಂಡು ಎಂಬ ಅಹಂ ಬೇಡ. ಹಾಗೆಯೇ ಇದರಲ್ಲಿ ನನ್ನದೂ ಸಮಪಾಲು ಇಲ್ವೇ ಎಂದು ನಿನ್ನದೇನು ಮಹಾ ಎಂದು ಅತಿಯಾದ ಅಹಂ ತೋರಿ ನಿಮ್ಮಾಕೆಗೆ ನೋವು ಕೊಡಬೇಡಿ.

ಇಬ್ಬರದೂ ಸಮಪಾಲು ಎನ್ನುವುದೇನೋ ನಿಜ. ಆದರೆ ಹೊರುವವಳು, ನೋವು ಅನುಭವಿಸುವವಳು ಹೆಣ್ಣು ಎನ್ನುವುದನ್ನು ಮರೆಯಬೇಡಿ. ಹಾಗಾದರೆ ಅವಳಿಗೆ ಸಂತೋಷ ಕೊಡಲು ನೀವೇನು ಮಾಡಬಹುದು?

·         ಮನೆ ಕೆಲಸಗಳಲ್ಲಿ ಸಹಾಯ ಮಾಡಿ. ಸಾಧ್ಯವಾದಷ್ಟು ಹಂಚಿಕೊಂಡು ಕೆಲಸ ಮಾಡಿ.
·         ಆಗಾಗ ಅವಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿರಿ.
·         ನಿಮ್ಮಾಕೆಯೂ ಕೈ ತುಂಬಾ ದುಡಿಯುವವಳೇ ಆಗಿದ್ದರೂ, ಸಾಧ್ಯವಾದಾಗಲೆಲ್ಲಾ ಆಕೆಗೆ ಉಡುಗೊರೆ, ಪ್ರೊಟೀನ್ ಅಂಶದ ಆಹಾರ ವಸ್ತುಗಳನ್ನು ತಂದು ಆರೈಕೆ ಮಾಡುತ್ತಿರಿ.
·         ಅವಳ ಹೊಟ್ಟೆಯಲ್ಲಿ ಚಿಗುರೊಡೆಯುತ್ತಿರುವ ನಿಮ್ಮ ಕಂದಮ್ಮನ ಸಣ್ಣ ಮಿಡಿತವನ್ನು ಆಲಿಸಿ.
·         ಹೊತ್ತು ಹೊತ್ತಿಗೆ ಅವಳ ಆಹಾರ, ಉಪಚಾರದ ಬಗ್ಗೆ ಗಮನ ಕೊಡಿ.
·         ಅವಳೆದುರಿಗೆ ಸಿಟ್ಟು ಪ್ರದರ್ಶಿಸುವುದು, ಜೋರಾಗಿ ಮಾತನಾಡುವುದು ಮಾಡಬೇಡಿ.
·         ಮುಖ್ಯವಾಗಿ ಅವಳ ಸಣ್ಣ ಪುಟ್ಟ ಆತಂಕಗಳಿಗೂ ಕಿವಿಯಾಗಿ. ಸಾಂತ್ವನ ಹೇಳಿ.
·         ಮನೆಯಲ್ಲಿ ಆದಷ್ಟು ಸಂತೋಷದ ವಾತಾವರಣವಿರುವಂತೆ ನೋಡಿಕೊಳ್ಳಿ.
·         ಹೆರಿಗೆಯಾಗುವ ಸಂದರ್ಭದಲ್ಲೂ ಆಕೆಯ ಜತೆಗೇ ಇರಿ.

ನೆನಪಿಡಿ. ಹೆಣ್ಣಿನ ಮನಸ್ಸು ಈ ಸಂದರ್ಭದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತದೆ. ಗಂಡ ಗರ್ಭಿಣಿಯಾಗಿರುವಾಗ ತನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವರ ಸಂಬಂಧವೂ ಅಷ್ಟೇ ಚೆನ್ನಾಗಿರುತ್ತದೆ. ಮಗುವಿನ ಆಗಮನ ಎನ್ನುವುದು ಗಂಡ-ಹೆಂಡಿರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ದೂರ ಮಾಡುವ ಅವಕಾಶವಾಗಿರುತ್ತದೆ. ಹೊಸ ಸಂಬಂಧದ ಚಿಗುರಿಗೆ ಕಾರಣವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments