Webdunia - Bharat's app for daily news and videos

Install App

ರಕ್ತದೋತ್ತಡ, ಮಧುಮೇಹ ಕಡಿಮೆ ಮಾಡಬಲ್ಲದ್ದು ಫೇಸ್ಬುಕ್, ಟ್ವಿಟರ್.. ಅಧ್ಯಯನದಿಂದ ಬಹಿರಂಗ

Webdunia
ಶನಿವಾರ, 27 ಆಗಸ್ಟ್ 2016 (10:35 IST)
ಟ್ವಿಟರ್ ಫೇಸ್‌ಬುಕ್ ಎಲ್ಲರೂ ಬಳಕೆ ಮಾಡುತ್ತಾರೆ. ಆದ್ರೆ ಸಾಮಾಜಿಕ ಮಾಧ್ಯಮ ಕೇವಲ ಒಂಟಿತನವನ್ನು ಹೊಗಲಾಡಿಸುವುದಲ್ಲದೇ, ಮಧುಮೇಹ ಹಾಗೂ ರಕ್ತದೋತ್ತಡವನ್ನು ಹೊಗಲಾಡಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ವಯಸ್ಸಾದವರಿಗೆ ಒಂದು ಸಿಹಿ ಸುದ್ದಿ... ನಿಮ್ಮ ಅಜ್ಜ- ಅಜ್ಜಿ ಫೇಸ್‌ಬುಕ್, ಟ್ವಿಟರ್ ಬಳಕೆ ಮಾಡುತ್ತಿದ್ದಾರಾ? ಹೌದು ಎಂದಾದರೆ
ಸಂಶೋಧನೆಯೊಂದು ಸಾಮಾಜಿಕ ಜಾಲತಾಣ ಕುರಿತು ಅಂಶವೊಂದನ್ನು ಬಹಿರಂಗಪಡಿಸಿದೆ.

ಫೇಸ್ಬುಕ್, ಟ್ವಿಟರ್ ಉಪಯೋಗದಿಂದ ಬಿಪಿ, ಮಧುಮೇಹ ಕಾಯಿಲೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
 
ಚಿಕ್ಕವರು ಫೇಸ್ಬುಕ್, ಟ್ವಿಟರ್ ಅಂಟಿಕೊಂಡಿರುವುದರಿಂದ ಮಾನಸಿಕ ಒತ್ತಡದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು.
 
ಆದ್ರೆ ಹಿರಿಯ ನಾಗರೀಕರು ಸೋಷಿಯಲ್ ಮೀಡಿಯಾಗಳ ಫೇಸ್ಬುಕ್, ಟ್ವಿಟರ್ ಬಳಕೆ ಮಾಡುವುದರಿಂದ, ಮೆಸೇಜ್ ಮಾಡುವುದರಲ್ಲಿ ಕಾಲ ಕಳೆಯುವುದರಿಂದ ಇದು ಕೇವಲ ಒಂಟಿತನವನ್ನು ನಿವಾರಿಸುವುದಲ್ಲದೇ, ರಕ್ತ ದೋತ್ತಡ ಹಾಗೂ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಬಲ್ಲದ್ದು ಎಂದು ಅಧ್ಯಯನದಿಂದ ಬಹಿರಂಗವಾಗಿದೆ.
 
ಹಿರಿಯ ನಾಗರೀಕರು ಹೆಚ್ಚು ಫೇಸ್ಬುಕ್, ಟ್ವಿಟರ್‌ಗಳಲ್ಲಿ ತೊಡಗಿಕೊಳ್ಳೋದು, ಇವುಗಳಲ್ಲಿ ಆ್ಯಕ್ಟಿವ್ ಆಗಿರುವುದು ಬಹಳ ಕಮ್ಮಿ. ಆದ್ರೆ 60 ವಯಸ್ಸಾದ ಅಜ್ಜ-ಅಜ್ಜಿಯರು ಫೇಸ್ಬೇಕ್ ಟ್ವಿಟರ್ ಬಳಕೆ ಮಾಡುತ್ತಿದ್ರೆ ಇದು ಅವರ ಒಂಟಿತನವನ್ನು ಹೊಗಲಾಡಿಸುವುದಲ್ಲದೇ, ಮಧುಮೇಹ, ರಕ್ತದೋತ್ತಡವನ್ನು ಇಳಿಕೆ ಮಾಡುತ್ತದೆ ಎಂದು ತಿಳಿದು ಬಂದಿದೆ.
 
ಸೋಷಿಯಲ್ ಮೀಡಿಯಾದಲ್ಲಿ ಇಮೇಲ್ಸ್, ಟ್ವಿಟರ್, ಸ್ಕೈಪೇ ಎಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಹಿರಿಯ ನಾಗರೀಕರಿಗೆ ಇದು ಸಹಾಯಕಾರಿಯಾಗಬಲ್ಲದ್ದು ಎನ್ನಲಾಗಿದೆ. 
 
ದೈಹಿಕ, ಮಾನಸಿಕ, ಹಾಗೂ ಆರೋಗ್ಯ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ಅತಿ ಹೆಚ್ಚು ಬಳಕೆ ಮಾಡುವುದು ಸರಿಯಲ್ಲದಿದ್ದರು. 
ಮಿತಿಯಾಗಿ ಬಳಕೆ ಮಾಡಿ ಯಾವುದೇ ಪರಿಣಾಮ ಬೀರುವುದಿಲ್ಲ. ಅಧ್ಯನದಲ್ಲಿ ಸುಮಾರು ಶೇಕಡಾ 95 ರಷ್ಟು ಹಿರಿಯ ನಾಗರೀಕರನನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ವೇಳೆ ಕೆಲವರು ತಂತ್ರಜ್ಞಾನದಿಂದ ತೃಪ್ತರಾಗಿದ್ದರೆ. ಮತ್ತೆ ಶೇ 72ರಷ್ಟು ಹೊಸ ತಂತ್ರಜ್ಞಾನವನ್ನು ಕಲಿಯುವುದನ್ನು ವಿರೋಧಿಸಿದ್ದರು. 
 
ಹಿರಿಯ ವಯಸ್ಕರು ಇತ್ತೀಚಿನ ದಿನಗಳಲ್ಲಿ ಫೇಸ್ಬಕ್, ಟ್ವಿಟರ್ ಬಳಕೆ ಮಾಡುವುದು ಉತ್ತಮ. ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದರಿಂದ ಆಗಬಹುದಾದ ಲಾಭಗಳ ಬಗ್ಗೆ 68 ವರ್ಷದ ಒಟ್ಟು 591ವ್ಯಕ್ತಿಗಳ ಮೇಲೆ ಅಧ್ಯಯನ ಮಾಡಲಾಗಿತ್ತು. ಈ ವೇಳೆ ಕಿರಿಯರಿಗಿಂತ ಹಿರಿಯರು ಮೇಲೆ ಫೇಸ್ಬೇಕ್, ಟ್ವಿಟರ್ ಯಾವುದೇ ಪರಿಣಾಮ ಬೀರುವುದಿಲ್ಲ, ಆದ್ರೆ ಇವರಿಗೆ ಮಧುಮೇಹ, ಬಿಪಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದಿದೆ ಅಧ್ಯಯನ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಚಿಕ್ಕವರು ಫೇಸ್ಬುಕ್, ಟ್ವಿಟರ್ ಅಂಟಿಕೊಂಡಿರುವುದರಿಂದ ಮಾನಸಿಕ ಒತ್ತಡದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹಿರಿಯ ನಾಗರೀಕರ ಮೇಲೆ 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments