ಸಪೋಟ ಹಣ್ಣಿನ ಉಪಯೋಗಗಳು

Webdunia
ಬುಧವಾರ, 3 ಅಕ್ಟೋಬರ್ 2018 (18:06 IST)
ಸಪೋಟ ಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಉತ್ಕರ್ಷಣ ನಿರೋಧಿ ಅಂಶಗಳಿಂದ ಶ್ರೀಮಂತವಾಗಿರುವ ಸಪೋಟ ವಿಟಮಿನ್ ಇ, ಎ, ಸಿ ಮತ್ತು ಕಬ್ಬಿಣ ಮತ್ತು ತಾಮ್ರದ ಗುಣಗಳನ್ನು ಹೊಂದಿದೆ. 
* ವಿಟಮಿನ್ ಎ ಅಂಶವನ್ನು ಹೊಂದಿರುವ ಚಿಕ್ಕುವಿನಿಂದ ಕಣ್ಣಿನ ದೃಷ್ಟಿ ಸುಧಾರಣೆಯಾಗುತ್ತದೆ.
 
* ಸಪೋಟದಲ್ಲಿ ವಿಟಮಿನ್ ‘ಎ’ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.
 
* ಈ ಹಣ್ಣಿನಲ್ಲಿ ವಿಟಮಿನ್ ಬಿ-ಕಾಂಪ್ಲೆಕ್ಸ್ ಹೇರಳವಾಗಿರುವ ಕಾರಣ ಈ ಗುಂಪಿನ ವಿಟಮಿನ್ನುಗಳಿಂದ ದೊರಕುವ ಎಲ್ಲಾ ಪ್ರಯೋಜನಗಳು ದೊರಕುತ್ತವೆ.
 
* ಸಪೋಟ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
 
* ತಾಜಾ ಸಪೋಟವನ್ನು ಹಾಗೆಯೇ ತಿಂದರೆ ಜೀರ್ಣಕ್ರಿಯೆಗೆ ಬೇಕಾದ ನಾರಿನಂಶವನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ. 
 
* ಸಪೋಟದಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಇದರಿಂದ ವಾಕರಿಕೆ, ತಲೆ ತಿರುಗುವುದು, ಸುಸ್ತು ಕಡಿಮೆಯಾಗುತ್ತದೆ.
 
* ಇದರ ಬೀಜಗಳನ್ನು ಅರೆದು ಪೇಸ್ಟ್‌ ಮಾಡಿ ಹರಳೆಣ್ಣೆಯ ಜೊತೆ ಮಿಶ್ರಣ ಮಾಡಿಕೊಂಡು ನೆತ್ತಿಯಮೇಲೆ ಹಚ್ಚಿ. ಒಂದು ರಾತ್ರಿಕಳೆದು ಮಾರನೇ ದಿನ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಮೃದುವಾಗುವುದಲ್ಲದೆ ತಲೆಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು
 
* ಸಪೋಟದಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವು ದೇಹದ ಮಾಂಸಖಂಡಗಳ ಬಲವರ್ಧನೆಗೆ ನೆರವಾಗುತ್ತದೆ.
 
* ಸಪೋಟದಲ್ಲಿರುವ ಅತಿ ಹೆಚ್ಚಿನ ಟ್ಯಾನಿನ್ ಅಂಶವು ಪ್ರಮುಖ ಉರಿಯೂತ ವಿರೋಧಿ ಗುಣಗಳನ್ನು ಹೊಂದಿರುತ್ತದೆ.
 
* ಸಪೋಟ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಗಂಧಕ, ಕಬ್ಬಿಣ ಹಾಗೂ ಇತರ ಖನಿಜಗಳು ಮೂಳೆಗಳನ್ನು ಆರೋಗ್ಯಕರವಾಗಿ ಹಾಗೂ ದೃಢಯುತವಾಗಿರಿಸಲು ನೆರವಾಗುತ್ತವೆ
 
* ಸಪೋಟ ರಕ್ತ ಶುದ್ಧಿ ಮಾಡುತ್ತದೆ ಹಾಗೂ ದೇಹದಲ್ಲಿ ರಕ್ತ ಉತ್ಪಾದಿಸಲು ಸಹಾಯ ಮಾಡುತ್ತದೆ.
 
* ಇದರಲ್ಲಿರುವ ಪ್ರಬಲ ನಿದ್ರಾಜನಕ (ಸೆಡೇಟಿವ್) ಉದ್ರೇಕಗೊಂಡಿರುವ ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆಮಾಡುತ್ತದೆ. ಆದ್ದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments