Select Your Language

Notifications

webdunia
webdunia
webdunia
webdunia

ಜೋತುಬಿದ್ದ ಚರ್ಮ ಮತ್ತೆ ಮೊದಲಿನಂತಾಗಲು ಈ ಮನೆಮದ್ದನ್ನು ಬಳಸಿ

ಜೋತುಬಿದ್ದ ಚರ್ಮ ಮತ್ತೆ ಮೊದಲಿನಂತಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 6 ಏಪ್ರಿಲ್ 2019 (07:42 IST)
ಬೆಂಗಳೂರು : ವಯಸ್ಸಾದಂತೆಯೇ ದೇಹದ ಚರ್ಮಗಳು ಜೋತು ಬೀಳುವುದು ಸಹಜ. ಆದರೆ ಕೆಲವರು ತೂಕ ಕಳೆದುಕಳ್ಳುವುದರಿಂದಲೂ ಅವರ ಚರ್ಮ ಜೋತು ಬೀಳುತ್ತದೆ. ಇಂತಹ ಜೋತುಬಿದ್ದ ಚರ್ಮವನ್ನು ಮತ್ತೆ ಸರಿಪಡಿಸಲು ಈ ಮನೆಮದ್ದುಗಳನ್ನು ಬಳಸಿ.


ಮೊಟ್ಟೆಯ ಬಿಳಿ ಭಾಗದೊಂದಿಗೆ ಗಟ್ಟಿ ಮೊಸರನ್ನು ಬೆರೆಸಿ ಚೆನ್ನಾಗಿ ಕಲಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು, 20-30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಲ್ಲಿ ತೊಳೆದುಕೊಳ್ಳಿ. ಈ ವಿಧಾನಗಳನ್ನ ನೀವು ವಾರಕ್ಕೆ ಎರಡು ಬಾರಿ ಮಾಡಬೇಕು.


ನಿಂಬೆ ರಸವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಲೇಪಿಸಿಕೊಂಡು 10 ನಿಮಿಷಗಳ ನಂತರ ನೀರಿನಲ್ಲಿ ತೊಳೆದುಕೊಳ್ಳಿ. ನೀವು ಇದನ್ನು ದಿನಕ್ಕೆ 2-3 ಬಾರಿ ಮಾಡಿ ಮತ್ತು ಇದನ್ನು ಮಾಡಿದ ನಂತರ ಒಳ್ಳೆಯ ಮೊಯಿಶ್ಚರೈಸರ್ ಅನ್ನು ಬಳಸಿ.


ಆಲೋ ವೆರಾದ ಜೆಲ್ ಅನ್ನು ಹೊರತೆಗೆದು, ಅದನ್ನು ನಿಮ್ಮ ಮುಖ, ಕತ್ತು ಮತ್ತು ಇತರೆ ಹಾನಿಯಾದ ಭಾಗಗಳಿಗೆ ಹಚ್ಚಿಕೊಳ್ಳಿ. ಅದನ್ನು ಹಾಗೆಯೇ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ವಾರದಲ್ಲಿ ಹಲವು ಬಾರಿ ಮಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಈ ಮನೆಮದ್ದನ್ನು ಬಳಸಿ